ಮಾದಪ್ಪನ ಬೆಟ್ಟದಲ್ಲಿ ಅಂತರಾಜ್ಯ ಕಳ್ಳರ ಬಂಧನ​! ಒಂದೇ ಒಂದು ಕೇಸ್​ನಿಂದ 14 ಪ್ರಕರಣ ಬೆಳಕಿಗೆ | Thieves

ವಿಜಯವಾಣಿ - 2024-11-19T213550.669
Published on

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ‌ ಅಂತರಾಜ್ಯ ಕಳ್ಳರು (Thieves) ತಗ್ಲಾಕೊಂಡಿದ್ದು, ಒಟ್ಟು 14 ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ‌.

ತಮಿಳುನಾಡು ಮೂಲದ ಕೊಡಂಗು ಸ್ವಾಮಿ (58) ಇಂದಿರರಾಜ್, (35) ಕೇರಳ ಮೂಲದ ಅಜಿತ್ (23)ಜೇಸುದಾಸ್ (39) ಬಂಧಿತರು‌. ಹನೂರು, ಗುಂಡ್ಲುಪೇಟೆ, ಕೊಳ್ಳೇಗಾಲ, ಬೇಗೂರು ಹಾಗೂ ಚಾಮರಾಜನಗರ ಮತ್ತು ಕೋಲಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 14 ಕಳವು ಪ್ರಕರಣ ಎಸಗಿದ್ದ ದುಷ್ಕರ್ಮಿಗಳ ಹೆಡೆಮುರಿ ಕಟ್ಟುವಲ್ಲಿ ಇದೀಗ ಪೊಲೀಸರು ಯಶಸ್ವಿಯಾಗಿದ್ದಾರೆ.

ಒಂದೇ ಒಂದು ಕೇಸ್​ನಿಂದ 14 ಪ್ರಕರಣ ಬೆಳಕಿಗೆ

ಹನೂರಿನ ಆಶ್ರಯ ಬಡಾವಣೆ ನಿವಾಸಿ ಸಾಬೀರ್ ಅಹಮದ್ ಮನೆಯಲ್ಲಿ 11 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಈ ಪ್ರಕಣರದ ಬೆನ್ನತ್ತಿದ್ದ ಪೊಲೀಸರು ಮಲೆ ಮಹದೇಶ್ವರ ಬೆಟ್ಟ ಸುತ್ತಮುತ್ತಲು ಖದೀಮರ ಗ್ಯಾಂಗ್ ಇರುವ ಮಾಹಿತಿ ಅರಿತು ಬಂಧಿಸಿದ್ದಾರೆ. ವಿಚಾರಣೆಗೆ ಒಳಪಡಿಸಲಾಗಿ ಹನೂರು, ದೊಡ್ಡಿಂದುವಾಡಿ, ಗುಂಡೇಗಾಲ, ಕೊಳ್ಳೇಗಾಲ ಪಟ್ಟಣ, ಚಾಮರಾಜನಗರ ಪಟ್ಟಣ, ಗುಂಡ್ಲುಪೇಟೆ ಮತ್ತು ಬೇಗೂರು ಮತ್ತು ಕೋಲಾರದಲ್ಲಿ ಒಟ್ಟು 14 ಕಡೆ ಕಳ್ಳತನ ಮಾಡಿರುವುದನ್ನು ಬಾಯಿಬಿಟ್ಟಿದ್ದಾರೆ.

ಬಂಧಿತರಿಂದ 41,69,000 ಬೆಲೆ ಬಾಳುವ 514.16 ಗ್ರಾಂ ಚಿನ್ನಾಭರಣಗಳು, ಮೂರು ಕೆಜಿ ಬೆಳ್ಳಿ ಆಭರಣಗಳು, 4,400 ನಗದು ಹಣ, ಕೃತಕ್ಕೆ ಬಳಸಿದ್ದ ಮಹೇಂದ್ರ ಕಾರು, ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net