ಅಂತಾರಾಜ್ಯ ಕಳ್ಳನ ಬಂಧನ, 150 ಗ್ರಾಂ ಚಿನ್ನಾಭರಣ ವಶ

05 GJD 1
Published on

ಗಜೇಂದ್ರಗಡ: ಪಟ್ಟಣದ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಪತ್ತೆಮಾಡಿರುವ ಪೊಲೀಸರು ಅಂತಾರಾಜ್ಯ ಕಳ್ಳನನ್ನು ಬಂಧಿಸಿ, ಆತನಿಂದ 150 ಗ್ರಾಂ ಚಿನ್ನ ಹಾಗೂ ಬಲೆನೋ ಕಾರು ಜಪ್ತಿ ಮಾಡಿದ್ದಾರೆ.
ಪಟ್ಟಣದ ದೋಟಿಹಾಳ ಪ್ಲಾಟ್‌ನಲ್ಲಿರುವ ಪ್ರಶಾಂತ ಸೂರ್ಯವಂಶಿ ಅವರ ಮನೆಯ ಕಿಟಕಿ ಮುರಿದು ಒಳನುಗ್ಗಿ ಚಿನ್ನ, ಬೆಳ್ಳಿ, ನಗದು ದೋಚಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಅಧಿಕಾರಿಗಳು ಸಿಪಿಐ ಸಿದ್ದು ಬೀಳಗಿ ಅವರ ನೇತೃತ್ವದ ತಂಡ ರಚಿಸಿದ್ದರು. ತನಿಖೆ ನಡೆಸಿದ ಈ ತಂಡ ಹೈದರಾಬಾದ್‌ನಿಂದ ಆರೋಪಿ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಕಾರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಇನ್ನೂ ಮೂವರಿಗಾಗಿ ಶೋಧ ಮುಂದುವರಿಸಿದ್ದಾರೆ.
ಸಿಪಿಐ ಸಿದ್ದು ಬೀಳಗಿ ನೇತೃತ್ವದಲ್ಲಿ ಪಿಎಸ್‌ಐ ಗಳಾದ ಸೋಮನಗೌಡ ಗೌಡ್ರ, ಎಲ್.ಕೆ. ಜೂಲಕಟ್ಟಿ, ಸಿಬ್ಬಂದಿ ಸಂಗಮೆಶ ಹಲವಾಗಿಲ, ಜೆ.ಬಿ. ಪೂಜಾರ, ಎಸ್.ವಿ. ಮಂತಾ, ಪಿ.ಆರ್. ಹೊಂಬಳ, ಪ್ರಕಾಶ ಭೂಸನೂರಮಠ, ಎಸ್.ವಿ. ಕದಂ, ಎಚ್.ವೈ. ಮ್ಯಾಗಳಮನಿ, ಶರಣಪ್ಪ ಓಜನಹಳ್ಳಿ, ಭಾಗ್ಯಶ್ರೀ ಆಲೂರ, ರೋಣ ಠಾಣೆಯ ಶಿವಕುಮಾರ ಹುಬ್ಬಳ್ಳಿ, ಕುಮಾರ ತಿಗರಿ, ಅಜಿತ ಗುರಮ್ಮನವರ ಕಾರ್ಯಾಚರಣೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net