ಅಂತರರಾಜ್ಯ ಡ್ರಗ್ ಪೆಡ್ಲರ್ಸ್ : 1.5 ಕೋಟಿ ರೂ. ಮೌಲ್ಯದ ಗಾಂಜಾ ವಶ

drugs
Published on

ಬೆಂಗಳೂರು : ಟ್ರಕ್ ಡ್ರೈವರ್ ಕ್ಯಾಬಿನ್ ಹಿಂಭಾಗದಲ್ಲಿ ಅಂಡರ್​​ಗ್ರೌಂಡ್ ರೀತಿ ವ್ಯವಸ್ಥೆ ಮಾಡಿ ಬಚ್ಚಿಟ್ಟು ಅಕ್ರಮವಾಗಿ ಡ್ರಗ್ಸ್ ಮಾರಲು ಯತ್ನಿಸುತ್ತಿದ್ದ ಮೂವರು ಅಂತರರಾಜ್ಯ ಡ್ರಗ್ ಪೆಡ್ಲರ್​​ಗಳನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ 1.5 ಕೋಟಿ ರೂ. ಮೌಲ್ಯದ 500 ಕೆಜಿ ಗಾಂಜಾ ಮತ್ತು ಟ್ರಕ್​ಅನ್ನು ವಶ ಪಡಿಸಿಕೊಳ್ಳಲಾಗಿದೆ.

ಬೆಂಗಳೂರಿನ ಕೆ.ಆರ್.ಪುರಂ ಪೊಲೀಸ್ ಇನ್ಸ್​ಪೆಕ್ಟರ್ ಮತ್ತು ಅವರ ತಂಡ ವೈಟ್​ಫೀಲ್ಡ್​ನಲ್ಲಿ ಡ್ರಗ್ ಖರೀದಿದಾರರಂತೆ ಸೋಗು ಹಾಕಿಕೊಂಡು ವ್ಯವಹರಿಸಿ ಈ ಪೆಡ್ಲರ್​ಗಳ ಜಾಲವನ್ನು ಪತ್ತೆ ಹಚ್ಚಿದ್ದಾರೆ, ಈ ಬಗ್ಗೆ ಎನ್​ಡಿಪಿಎಸ್​ ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಕಮಿಷನರ್ ಕಮಲ್ ಪಂತ್ ಮತ್ತು ವೈಟ್​ಫೀಲ್ಡ್ ಡಿಸಿಪಿ ದೇವರಾಜ್ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net