ಗಡಿ ತೆರವು ಮಾಡದ ಕೇರಳ ಸರ್ಕಾರ

thalapady
Published on

ಕಾಸರಗೋಡು: ದೇಶದ ಎಲ್ಲ ಅಂತಾರಾಜ್ಯ ಗಡಿಗಳನ್ನು ತೆರೆದು ಜನ ಹಾಗೂ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರ (ಗೃಹ ಖಾತೆ) ನೀಡಿದ್ದ ಆದೇಶಕ್ಕೆ ಕೇರಳ ಸರ್ಕಾರ ಬೆಲೆ ನೀಡದೆ ಜನವಿರೋಧಿ ನೀತಿ ಮುಂದುವರಿಸಿದೆ.

ಗಡಿ ತೆರೆಯುವಂತೆ 22ರಂದೇ ಎಲ್ಲ ರಾಜ್ಯಗಳಿಗೂ ಕೇಂದ್ರ ಆದೇಶ ರವಾನಿಸಿತ್ತು. ಇತರ ರಾಜ್ಯಗಳಿಗೆ ತೆರಳಲು ಜನರಿಗೆ ಅಥವಾ ವಾಹನಗಳಿಗೆ ಪಾಸ್ ಅಥವಾ ವಿಶೇಷ ಅನುಮತಿ ಅಗತ್ಯವಿಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಕೇಂದ್ರ ಸರ್ಕಾರದ ಕೋವಿಡ್ ಅನ್‌ಲಾಕ್-3 ಗೈಡ್‌ಲೈನ್ ಅನ್ವಯ ಈ ಆದೇಶ ಹೊರಡಿಸಲಾಗಿದೆ.

ಈ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ.ಡಿ, ನಮಗಿನ್ನೂ ರಾಜ್ಯ ಸರ್ಕಾರದಿಂದ ಗಡಿ ತೆರವು ಆದೇಶ ಬಂದಿಲ್ಲ. ಈ ಹಿನ್ನೆಲೆಯಲ್ಲಿ ತಲಪಾಡಿ ಸಹಿತ ಗಡಿಭಾಗದಲ್ಲಿ ಈ ಹಿಂದಿನ ನಿರ್ಬಂಧ ಮುಂದುವರಿಸಲಾಗುತ್ತಿದೆ. ರಾಜ್ಯ ಸರ್ಕಾರದ ಆದೇಶಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net