

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ನಿಮಿತ್ತ ಹೆಸ್ಕಾಂ ಆನ್ಲೈನ್ ಸೇವೆಗಳಾದ ಹೊಸ ಸಂಪರ್ಕ, ಹೆಸರು ಮತ್ತು ಜಕಾತಿ ಬದಲಾವಣೆ ಇತ್ಯಾದಿ ಸೇವೆಗಳು ಅ. 4ರ ರಾತ್ರಿ 9ಗಂಟೆಯಿಂದ ಅ. 7ರ ಬೆಳಗ್ಗೆ 6ಗಂಟೆಯವರೆಗೆ ನಗರ ಪ್ರದೇಶದ ಗ್ರಾಹಕರಿಗೆ ಲಭ್ಯವಿರುವುದಿಲ್ಲ.
ಆನ್ಲೈನ್ ವಿದ್ಯುತ್ ಬಿಲ್ ಪಾವತಿ ಸೇವೆಯು ಅ. 4ರ ರಾತ್ರಿ 9ಗಂಟೆಯಿಂದ ಅ. 5ರ ಬೆಳಗ್ಗೆ 11ಗಂಟೆಯವರೆಗೆ ಲಭ್ಯವಿರುವುದಿಲ್ಲ. ತದನಂತರ ಗ್ರಾಹಕರು ಆನ್ಲೈನ್ ಮೂಲಕ ವಿದ್ಯುತ್ ಬಿಲಾ ಪಾವತಿ ಮಾಡಬಹುದಾಗಿದೆ.
ಅಥಣಿ, ಬಾಗಲಕೋಟ, ಬೈಲಹೊಂಗಲ, ಬೆಳಗಾವಿ, ಭಟ್ಕಳ, ಚಿಕ್ಕೋಡಿ, ದಾಂಡೇಲಿ, ಗದಗ, ಗೋಕಾಕ, ಗುಳೇದಗುಡ್ಡ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಇಳಕಲ್, ಇಂಡಿ, ಜಮಖಂಡಿ, ಕಾರವಾರ, ಕುಮಟಾ, ಲಕ್ಷ್ಮೇಶ್ವರ, ಮಹಾಲಿಂಗಪೂರ, ಮುಧೋಳ, ನರಗುಂದ, ನಿಪ್ಪಾಣಿ, ರಬಕವಿ-ಬನಹಟ್ಟಿ, ರಾಮದುರ್ಗ, ರಾಣೆಬೆನ್ನೂರ, ಸವದತ್ತಿ, ಸವಣೂರ, ಶಿರಸಿ ಹಾಗೂ ವಿಜಯಪುರ ಪಟ್ಟಣದಲ್ಲಿ ಆನ್ಲೈನ್ ಸೇವೆಯಲ್ಲಿ ವ್ಯತ್ಯವಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.
ಹೊಸ ತಂತ್ರಾಂಶವು ಉನ್ನತೀಕರಣಗೊಂಡು ಸ್ಥಿರವಾಗಿ ಕಾರ್ಯನಿರ್ವಹಣೆ ಮಾಡಲು 15 ದಿನಗಳ ಕಾಲಾವಕಾಶ ಬೇಕಿದ್ದು, ಈ ಅವಧಿಯಲ್ಲಿ ತಂತ್ರಾಂಶದ ಕಾರ್ಯಕ್ಷಮತೆಯಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಯ ಉಂಟಾಗಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದೆ.