ಪೊಲೀಸರಿಂದ ಮತ್ತೆ ಮೂವರ ವಿಚಾರಣೆ

Hubballi crime
Published on

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕ ಸಂದೀಪನನ್ನು ವಿವಸ್ತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಬೆಂಡಿಗೇರಿ ಠಾಣೆ ಪೊಲೀಸರು, ಮೂವರು ಪ್ರಮುಖ ಆರೋಪಿಗಳನ್ನು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಯಮನೂರು ಯರಕಲ್, ಕಾರ್ತಿಕ ಜಬಲಾಪೂರ ಹಾಗೂ ಪವನ ಇಂದರಗಿ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ಮಹಾನಗರ ಪಾಲಿಕೆ ಸದಸ್ಯೆಯ ಪುತ್ರರಿಬ್ಬರು ಸೇರಿ ಒಟ್ಟು 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಸಂದೀಪನನ್ನು ಹಲ್ಲೆಗೊಳಿಸಿ ವಿಡಿಯೋ ವೈರಲ್ ಮಾಡಲಾಗುತ್ತಿದೆ. ಇದುವರೆಗೆ ಒಟ್ಟು ನಾಲ್ಕು ವಿಡಿಯೋಗಳು ಹೊರಬಿದ್ದಿವೆ. ಈ ಮೊದಲು ಐವರು ಮಾತ್ರ ಸಂದೀಪನ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗುತ್ತಿತ್ತು. ಮತ್ತೊಂದು ವಿಡಿಯೋದಲ್ಲಿ 20 ಜನರು ಇರುವುದನ್ನು ಬೆಂಡಿಗೇರಿ ಠಾಣೆ ಇನ್‌ಸ್ಪೆಕ್ಟರ್ ಜಯಪಾಲ ಪಾಟೀಲ ನೇತೃತ್ವದ ತಂಡ ಪತ್ತೆ ಹಚ್ಚಿದ್ದು, ಇತರರ ಹುಡುಕಾಟ ಮುಂದುವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net