

ಯಳಂದೂರು: ಪಟ್ಟಣದಲ್ಲಿರುವ ಸೆಸ್ಕ್‌ನ ಉಪವಿಭಾಗ ಕಚೇರಿಯಲ್ಲಿ ಅ.18ರಂದು ಟಿವಿ, ಇಂಟರ್‌ನೆಟ್, ಕೇಬಲ್ ಮಾಲೀಕರ ಸಭೆ ಆಯೋಜಿಸಲಾಗಿದ್ದು, ಸಂಬಂಧಪಟ್ಟ ತಾಲೂಕಿನ ಎಲ್ಲ ಮಾಲೀಕರು ಭಾಗವಹಿಸಬೇಕು ಎಂದು ಸೆಸ್ಕ್ ಇಲಾಖೆ ಮನವಿ ಮಾಡಿದೆ.
ವಿದ್ಯುತ್ ಕಂಬಗಳ ಮೇಲೆ ಟಿವಿ, ಇಂಟರ್‌ನೆಟ್, ಕೇಬಲ್ ವೈರ್‌ಗಳನ್ನು ಎಳೆಯಲಾಗಿದ್ದು, ಇದಕ್ಕೆ ವಾರ್ಷಿಕ ಶುಲ್ಕವನ್ನು ಪಾವತಿಸಬೇಕು ಎಂದು ನಿಗಮದ ಅಕಾರಿಗಳು ಸೂಚನೆ ನೀಡಿದ್ದಾರೆ. ಆದರೂ ಯಾರೂ ಕೂಡ ಇದನ್ನು ಪಾವತಿ ಮಾಡಿಲ್ಲ. ಹಾಗಾಗಿ ಈ ಸಂಬಂಧ ಸಭೆ ಕರೆಯಲಾಗಿದೆ. ಸಭೆಗೆ ಅಗತ್ಯ ಮಾಹಿತಿ ತರಬೇಕು.
ಇಲ್ಲವಾದಲ್ಲಿ ನಿಮ್ಮ ಗಮನಕ್ಕೆ ತಾರದೆ ಕೇಬಲ್ ವೈರ್‌ಗಳನ್ನು ತೆರವುಗೊಳಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಅದಕ್ಕೆ ಇಲಾಖೆ ಹೊಣೆಯಾಗುವುದಿಲ್ಲ ಎಂದು ಸೆಸ್ಕ್‌ನ ಎಇಇ ಲಿಂಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.