ಓಂ ಯೋಗ ಸ್ಟುಡಿಯೋದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Om yoga
Published on

ಬೆಂಗಳೂರು: ಇಪ್ಪತ್ತು ವರ್ಷಗಳಿಂದ ಅಷ್ಟಾಂಗ ಯೋಗವನ್ನು ಅಭ್ಯಾಸ ಮಾಡುತ್ತಿರುವ ವೆಂಕಟರಾಜು ಮತ್ತು ಅನುರಾಧಾ ಆರ್ಯಾ, ಮೂರು ವರ್ಷಗಳ ಹಿಂದೆ ಬೆಂಗಳೂರಿನ ಬಸವನಗುಡಿಯಲ್ಲಿ ಸ್ಥಾಪಿಸಿರುವ ಓಂ ಯೋಗ ಸ್ಟುಡಿಯೋದಲ್ಲಿ ಶುಕ್ರವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕೋವಿಡ್ ಸಂಕಷ್ಟದ ನಡುವೆಯೂ ಸಮುದಾಯಕ್ಕೆ ಉಂಟಾದ ಆರೋಗ್ಯ ಹಾನಿ, ಮಾನಸಿಕ ಖಿನ್ನತೆ ಮತ್ತು ಸಾಂಕ್ರಾಮಿಕದ ಆಘಾತವನ್ನು ಯೋಗಬ್ಯಾಸದ ಮೂಲಕ ಹೇಗೆ ತಡೆಯಬಹುದು ಎಂಬುದನ್ನು ತಿಳಿಸಲು ಆನ್‌ಲೈನ್ ತರಗತಿಗಳನ್ನು ನಡೆಸುವ ಮೂಲಕ ಜನಮನ್ನಣೆ ಪಡೆದ ಓಂ ಯೋಗ ಸ್ಟುಡಿಯೋ, ಲಾಕ್‌ಡೌನ್ ಸಮಯದಲ್ಲಿ ಓಂ ಯೋಗ ಸ್ಟುಡಿಯೋವನ್ನು ತೆರೆಯಲು ಪ್ರೇರಣೆ ನೀಡಿತು. ನಾಲ್ಕು ಬ್ಯಾಚುಗಳಲ್ಲಿ 200ಕ್ಕೂ ಹೆಚ್ಚು ಜನರಿಗೆ ಯೋಗ ತರಗತಿಯನ್ನು ನಡೆಸುವ ಪ್ರಸಿದ್ಧ ಸಂಸ್ಥೆಯಾಗಿದೆ.

ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಒಂದೇ ಸಮಯಕ್ಕೆ ಓಂ ಯೋಗ ಸ್ಟುಡಿಯೋ ಯೋಗದ ಶಕ್ತಿಯನ್ನು ಹಂಚಿಕೊಳ್ಳಲು ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿತ್‌ಉತ. ನೂರಾತು ಯೋಗ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗಾಭ್ಯಾಸ ಮಾಡಿದ್ದು ಎಲ್ಲರ ಗಮನ ಸೆಳೆಯಿತು.

ವಿಶ್ವದಾದ್ಯಂತ ಪ್ರಸಿದ್ಧವಾದ ಭಾರತೀಯ ಪರಂಪರೆಯ ಯೋಗದ ಮೌಲ್ಯವನ್ನು ಎಲ್ಲರಿಗೂ ತಿಳಿಸಲು ಓಂ ಯೋಗ ಸ್ಟುಡಿಯೋ ಶ್ರಮಿಸುತ್ತಿರುವುದು ಗಮನಾರ್ಹ.

ಅಷ್ಟಾಂಗ ಯೋಗದ ಪ್ರಯೋಜನಗಳು :

-ದೈಹಿಕ ಶಕ್ತಿ ಮತ್ತು ಸಹನಶೀಲತೆಯನ್ನು ಹೆಚ್ಚಿಸುವುದು

- ಮಾನಸಿಕ ಶಾಂತಿಯನ್ನು ಕಾಪಾಡಲು ಸಹಕಾರಿಯಾಗುವುದ

- ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸುವುದು

- ಒಟ್ಟಾರೆ ಆರೋಗ್ಯವನ್ನು ವೃದ್ಧಿಸುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net