

ರಾಯಚೂರು ಜಿಲ್ಲಾಡಲಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಹಾಗೂ ಯೋಗ ಸಂಘ ಸಂಸ್ಥಗಳ ವತಿಯಿಂದ ಗುರುವಾರ ಯೋಗ ಜಾಗೃತಿ ಜಾಥಾಕ್ಕೆ ಎಡಿಸಿ ಶಿವಾನಂದ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಿಅದ ಆರಂಭವಾದ ಜಾಥಾ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಸರ್ಕಾರಿ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆ ಎಕ್ ಮೀನಾರ್ ರೋಡ್‌ವರೆಗೆ ಸಂಚರಿಸಿತು. ಜಾಥಾದಲ್ಲಿ ಭಾಗಿಯಾಗಿದ್ದ ಶಾಲಾ ಮಕ್ಕಳು ನಾನಾ ಸಂದೇಶದ ಫಲಕಗಳನ್ನು ಪ್ರದರ್ಶಿಸಿ ಜಾಥಾದಲ್ಲಿ ಸಾಗಿ ಗಮನ ಸೆಳೆದರು.
ಜಾಥಾದಲ್ಲಿ ಆರೋಗ್ಯ ಅಧಿಕಾರಿ ಶಂಕರಗೌಡ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ, ಡಿಡಿಪಿಯು ಕೆ.ಕೊಟ್ರಬಸಪ್ಪ, ಕ್ರೀಡಾ ಇಲಾಖೆಯ ಅಧಿಕಾರಿ ಈರೇಶ್ ನಾಯಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಂಚಾಲಕ ಡಾ.ದಂಡಪ್ಪ ಬಿರಾದಾರ್, ಯೋಗ ತರಬೇತಿದಾರ ಡಾ.ತಿಮಪ್ಪ ವಡ್ಡೆಪಳ್ಳಿ , ಆಯುಷ್ ಇಲಾಖೆಯ ಡಾ.ನವೀನ, ಡಾ.ಪ್ರತಿಭಾ ಪಾಟೀಲ್, ಡಾ.ರಾಜೇಂದ್ರ, ಡಾ.ದುರುಗಪ್ಪ, ಡಾ.ಕನಕಲಕ್ಷ್ಮಿ, ಡಾ.ಅರುಣಾ, ಡಾ.ನಾಜಿಯಾ, ಡಾ.ಶಾಧೀಯಾ ಸೇರಿ ಅನೇಕರು ಇದ್ದರು.