ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ

yoga
Published on

ಸುಬ್ರಹ್ಮಣ್ಯ: ವರ್ಷಿಣಿ ಯೋಗ ಎಜುಕೇಷನ್ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಶಿವಮೊಗ್ಗದ ಡಿ.ವಿ.ಎಸ್. ಕಾಲೇಜಿನಲ್ಲಿ ಭಾನುವಾರ ನಡೆದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲಿ ಪ್ರಶಸ್ತಿ ಪಡೆದ ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್‌ನ ಅಮರ ಯೋಗ ಕೇಂದ್ರದ 4 ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಥಾಯ್ಲೆಂಡ್‌ನಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.

6ರಿಂದ 10ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಶೈನಿ ಕೊರಂಬಡ್ಕ ದ್ವಿತೀಯ ಸ್ಥಾನ, 11ರಿಂದ 13ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಜಿಶಾ ಕೊರಂಬಡ್ಕ ತೃತೀಯ ಸ್ಥಾನ, ನಿಹಾನಿ ವಾಲ್ತಾಜೆ ಚತುರ್ಥ ಸ್ಥಾನ, 11ರಿಂದ 13ರ ವಯೋಮಾನದಲ್ಲಿ ಮನಿಪ್ರಕಾಶ್ ಕಡೋಡಿ ದ್ವಿತೀಯ ಸ್ಥಾನ ಪಡೆದು ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಯೋಗಗುರು ಶರತ್ ಮರ್ಗಿಲಡ್ಕರ ಶಿಷ್ಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net