

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಎಐ ಆಧಾರಿತ ತಂತ್ರಜ್ಞಾನ ಪ್ರಗತಿಯಿಂದ ಬರಹಗಾರರು, ಸಂಗೀತ ತಂತ್ರಜ್ಞರು, ಚಿತ್ರಕಲೆ ಕಲಾವಿದರ ಕೆಲಸಗಳು ಇನ್ನಷ್ಟು ಉತ್ಕೃಷ್ಟವಾಗಿ ಮಾಡಲು ಸಹಾಯ ಮಾಡುತ್ತವೆ ಎಂದು ಮಾಜಿ ಸಂಸದೆ ಹಾಗೂ ಸುರೇಶ ಅಂಗಡಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷೆ ಮಂಗಲ ಅಂಗಡಿ ಹೇಳಿದರು.
ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಸರ್ಕಾರಿ ಶಾಲಾ ಶಿಕ್ಷಕರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಎಐ ಪರಿಕರಗಳ ಕುರಿತು ಕಾರ್ಯಾಗಾರ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಶಿಕ್ಷಕರ ಬೋಧನಾ ವಿಧಾನಗಳನ್ನು ಹೆಚ್ಚಿಸಬಹುದಾದ ವಿವಿಧ ಎಐ ಪರಿಕರಗಳ ಕುರಿತು ಪ್ರಾಯೋಗಿಕ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಶಿಕ್ಷಕರು ಸದುಪಯೋಗ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕಿ ಸ್ಫೂರ್ತಿ ಅಂಗಡಿ ಪಾಟೀಲ ಮಾತನಾಡಿ, ಮಹಿಳಾ ದಿನದ ವೇಳೆ ಎಐ ತಂತ್ರಜ್ಞಾನ ಕಾರ್ಯಗಾರ ಏರ್ಪಡಿಸಿದ್ದು, ವಿಶೇಷವಾಗಿ ಮಹಿಳೆಯರ ಜೀವನಮಟ್ಟ ಬೆಳವಣಿಗೆಗೆ ತಂತ್ರಜ್ಞಾನ ಪ್ರಗತಿ ಕಾರಣವಾಗಿದೆ. ಮಹಿಳಾ ಶಿಕ್ಷಕರು ಆಧುನಿಕ ತಂತ್ರಜ್ಞಾನದ ಜ್ಞಾನ ಪಡೆದುಕೊಳ್ಳಬೇಕು ಎಂದರು.
ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ, ಸಂಚಾಲಕಿಯರಾದ ಡಾ. ಧನಶ್ರೀ ಕುಲಕರ್ಣಿ, ಪ್ರೊ. ಪ್ರಿಯಾಂಕಾ ಪೂಜಾರಿ, ಸಂಯೋಜಕಿ ಪ್ರೊ.ವಿನಯಚಂದ್ರಿಕಾ ಕಾಳೆ ಇತರರಿದ್ದರು.