ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾ.11ರವರೆಗೆ ಸಮೃದ್ಧಿ ಮೇಳ: ಮಂಡ್ಯ ನಗರಸಭೆಯಿಂದ ಆಯೋಜನೆ

Cmc Mahila Dina)
Published on

ಮಂಡ್ಯ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ನಗರಸಭೆ ಕಚೇರಿ ಆವರಣದಲ್ಲಿ ಮಾ.11ರವರೆಗೆ ಆಯೋಜಿಸಿರುವ ಬೀದಿಬದಿ ವ್ಯಾಪಾರಿಗಳ ಸ್ವನಿಧಿ-ಸೇ ಸಮೃದ್ಧಿ ಮೇಳಕ್ಕೆ ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಎಲ್ಲ ರಂಗದಲ್ಲೂ ಮಹಿಳೆಯರು ಸಾಧನೆ ಮಾಡಿ ತೋರಿಸಿಕೊಟ್ಟಿದ್ದಾರೆ. ಬೀದಿ ಬದಿ ವ್ಯಾಪಾರಿಗಳು 10 ಸಾವಿರ ರೂ ಸಾಲ ಪಡೆದು ಅದನ್ನು ತೀರಿಸಿದ್ದಾರೆ. ಈ ಮೂಲಕ ಆರ್ಥಿವಾಗಿ ಸಬಲರಾಗುತ್ತಿದ್ದಾರೆ ಎಂದರು.

ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎನ್.ಆರ್.ವೇಣುಗೋಪಾಲ್, ಪೌರಾಯುಕ್ತ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪುಟ್ಟಸ್ವಾಮಿ, ಸದಸ್ಯರಾದ ರವಿ, ಸೌಭಾಗ್ಯ, ಲಲಿತಾ, ಪವಿತ್ರಾ ಬೋರೇಗೌಡ, ರಜಿನಿ, ಶ್ರೀಧರ್, ನಾಗೇಶ್, ಸಮುದಾಯ ಸಂಘಟಕ ಸಿ.ವಿ.ತುಳಸಿದಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net