

ಮಂಡ್ಯ: ಮಹಿಳೆಯರು ತಮ್ಮ ಹಕ್ಕು ಹಾಗೂ ಮೂಲ ಸೌಕರ್ಯಕ್ಕಾಗಿ ಹೋರಾಟ ಮಾಡಿದರ ನೆನಪಿನ ಅಂಗವಾಗಿ ಮಹಿಳಾ ದಿನವನ್ನು ಆಚರಿಸುತ್ತಿದ್ದೇನೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು,
ನಗರದ ಬಂದೀಗೌಡ ಬಡಾವಣೆಯ ಕಸಾಪ ಭವನದಲ್ಲಿ ನಗರ ಕಸಾಪದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತಿ ಅತ್ತಿಮೊಬ್ಬೆ ಅವರು ೧೦ನೇ ಶತಮಾನದಲ್ಲೇ ಸಾಹಿತ್ಯ ಮತ್ತು ಆಡಳಿತಾತ್ಮಕವಾಗಿ ದಾಖಲೆಯಾಗಿದ್ದರು. ೧೨ನೇ ಶತಮಾನದಲ್ಲಿ ಅಕ್ಕಮಹಾದೇವಿ ಹೆಣ್ಣನ್ನು ಯಾವ ರೀತಿ ನೋಡಬೇಕೆಂಬುದನ್ನು ಹೇಳಿಕೊಟ್ಟಿದ್ದರು. ಮಹಿಳೆಯ ಬಗ್ಗೆ ಹೊಸ ದೃಷ್ಟಿಕೋನ ಬರುವಂತೆಯೂ ಅಕ್ಕಮಹಾದೇವಿ ಮಾಡಿದ್ದರೂ ಎಂದು ಹೇಳಿದರು.
ಅಧ್ಯಾಪಕಿ ಎಂ.ಯು.ಶ್ವೇತಾ ಮಾತನಾಡಿ, ಹೆಣ್ಣಿಗೆ ಶೋಷಣೆ ದೌರ್ಜನ್ಯ, ನೋವು ಅನ್ನುವಂತದ್ದು ಕುಟುಂಬದಿAದಲೇ ಆರಂಭವಾಗುತ್ತದೆ. ಕುಟುಂಬದಲ್ಲಿ ಮಹಿಳೆಯರಿಗೆ ಬೆಂಬಲ ಸಿಕ್ಕರೆ ಧೈರ್ಯದಿಂದ ತನ್ನ ಕೆಲಸದಲ್ಲಿ ಮುನ್ನುಗ್ಗಿ ಯಶಸ್ಸು ಗಳಿಸಬಲ್ಲಳು. ಹೆಣ್ಣಿಗೆ ಹೆಣ್ಣಿ ಶತ್ರುವಾಗದೆ ತಮ್ಮ ತಪ್ಪುಗಳನ್ನು ಅರಿತು ಸಮಾಜದ ಅನಿಷ್ಟ ಪದ್ದತಿಗಳಿಂದ ಹೊರ ಹಾಕಬೇಕು. ಮಹಿಳೆಯನ್ನು ಮೊದಲು ಕುಟುಂಬದಲ್ಲಿ ಪ್ರೋತ್ಸಾಹಿಸುವ ಕೆಲಸವಾಗಲಿ ಎಂದರು.
ನಗರ ಕಸಾಪ ಅಧ್ಯಕ್ಷೆ ಸಿ.ಜೆ.ಸುಜಾತ ಕೃಷ್ಣ ಮಾತನಾಡಿ, ಮಹಿಳೆ ಯಾವುದರಲ್ಲೂ ಕಡಿಮೆ ಇಲ್ಲ. ಎಲ್ಲ ರಂಗದಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿದ್ದಾಳೆ. ಉದ್ಯಮದಲ್ಲೂ ಕೂಡ ಪುರುಷರಿಗೆ ಸರಿ ಸಮಾನವಾಗಿ ನಿಂತಿದ್ದಾಳೆ ಎಂದು ತಮ್ಮ ಅಭಿಪ್ರಾಯಿಸಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಕಾರ್ಯದರ್ಶಿ ಬಿ.ಧನಂಜಯ ದರಸಗುಪ್ಪೆ ಇತರರಿದ್ದರು. ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಕೆಂಪಮ್ಮ, ಆಶಾ ಪುಟ್ಟೇಗೌಡ, ಎಂ.ಚೇತನಾ, ವಸಂತ ಕರಡಕೆರೆ ಅವರನ್ನು ಅಭಿನಂದಿಸಲಾಯಿತು.