

ರಾಯಚೂರು ಪುಲ್ಲಿಂಗ ನಾನಲ್ಲ, ಸಿöÃಲಿಂಗ ನಾನಲ್ಲ ನನ್ನ ಅಂತರಲಿAಗವನ್ನು ನಿರ್ಧರಿಸುವ ಮಹಾಲಿಂಗಿ ನಾನು ಅಷ್ಟೇ ಅಲ್ಲದೇ ನಾವು ಭಿಕ್ಷಾಟನೆ ಮತ್ತು ಸೆಕ್ಸ್ವರ್ಕ್ ಮಾಡುವುದಕ್ಕೆ ಮಾತ್ರ ಸೀಮಿತವಲ್ಲ ನಾವು ಕೂಡ ಕಲಾವಿದರು, ಸಂವಿಧಾನ ಸರ್ವರಿಗೂ ಸಮಾನ ಅವಕಾಶ ನೀಡಿದೆ ಎಂದು ಬೆಂಗಳೂರಿನ ಲೇಖಕಿ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರರಾದ ಅಕ್ಕಯ್ ಪದ್ಮಶಾಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆಯ ಅಂಗವಾಗಿ ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗಾಗಿ : ಹಕ್ಕುಗಳು, ಸಮಾನತೆ, ಸಬಲೀಕರಣ ವಿಷಯ ಕುರಿತು ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಸಮಾಜಕ್ಕಿರುವ ತಾತ್ಸಾ÷್ಸರದ ವಿರುದ್ಧ ಅವರ ಸಮುದಾಯದ ನೋವುಗಳನ್ನು ಹಂಚಿಕೊಳ್ಳುವುದರ ಜೊತೆಗೆ ಹೋರಾಟದಿಂದಲೇ ಸಂವಿಧಾನದ ಗುರಿಗಳನ್ನು ತಲುಪಬೇಕಿದೆ.
ಭಾರತ ದೇಶ ಅಂಬೇಡ್ಕರ್ ಕೊಟ್ಟ ಸಂವಿಧಾನ ದೇಶವಾಗಿದೆ. ಆದರೂ ಆರ್ಥಿಕವಾಗಿ ಸಬಲೀಕರಣ ಸಾಧ್ಯವಾಗುತ್ತಿಲ್ಲ, ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ಹೋರಾಟ ಮಾಡುವುದರ ಮೂಲಕ ಸಂವಿಧಾನದ ಕೆಲವು ಕಾಯ್ದೆಗಳಲ್ಲಿ ನಾವು ಕಾಣಿಸಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುಲಪತಿ(ಹಂಗಾಮಿ)ಗಳಾದ ಡಾ.ಸುಯಮೀಂದ್ರ ಕುಲಕರ್ಣಿ ಮಾತನಾಡಿ, ಸಿöÃ-ಪುರುಷ ಮತ್ತು ಅಂತರಲಿAಗಿಗಳು ಎಲ್ಲರೂ ಸಮಾನತೆಯಿಂದ ಸಮಾಜದಲ್ಲಿ ಬದುಕಿದಾಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಡಾ.ಲತಾ.ಎಂ.ಎಸ್, ಡಾ.ಕೆ.ವೆಂಕಟೇಶ್,ಪ್ರೊ.ಪಾರ್ವತಿ ಸಿ.ಎಸ್ ಸೇರಿ ಅನೇಕರು ಇದ್ದರು.