ಎಸ್‌ಡಿಎ೦ ವಿವಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

8 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಸತ್ತೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದಲ್ಲಿ ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ವಿವಿಧ ವಿಭಾಗಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗೌರವಿಸುವುದು ಮತ್ತು ಲಿಂಗ ತಾರತಮ್ಯ ಹೋಗಲಾಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.

ಎಸ್‌ಡಿಎಂ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಉಪ ಕುಲಪತಿ ಡಾ. ನಿರಂಜನ್ ಕುಮಾರ್ ಗೌರವ ಅತಿಥಿಯಾಗಿದ್ದರು. ಹಣಕಾಸು ಅಽಕಾರಿ ವಿ.ಜಿ. ಪ್ರಭು, ಕಾರ್ಯದರ್ಶಿ ಜೀವಂಧರ ಕುಮಾರ್, ಕುಲಸಚಿವ ಚಿದೇಂದ್ರ ಶೆಟ್ಟರ್, ಡಾ. ಸಂಜಯ ಪರಮಾರ್, ನೇತ್ರತಜ್ಞ ಶಂಕರಗೌಡ ಪಾಟೀಲ, ಇತರರಿದ್ದರು. ಮಾನಸಿಕ ಆರೋಗ್ಯ, ಮಹಿಳೆಯರಿಗೆ ಪೋಷಣೆ ಮತ್ತು ಮಹಿಳೆಯರಿಗೆ ಸದೃಢತೆ ವಿಷಯಗಳ ಕುರಿತು ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು. ಮಹಿಳೆಯರಿಗಾಗಿ ರಸಪ್ರಶ್ನೆ ಸ್ಪರ್ಧೆ, ಕಿರುನಾಟಕ ಮತ್ತು ಮೋಜಿನ ಆಟಗಳನ್ನು ಆಡಿಸಲಾಯಿತು. ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಜೀವರಸಾಯನಶಾಸ್ತç ವಿಭಾಗದ ಪ್ರಾಧ್ಯಾಪಕಿ ಡಾ. ವಿದ್ಯಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಡಾ. ಶುಭ ಅಕಾದಾಸ್ ಸ್ವಾಗತಿಸಿದರು. ಡಾ. ಸಂಗೀತಾ ಅಪ್ಪನ್ನವರ ನಿರೂಪಿಸಿದರು. ಡಾ. ಶ್ವೇತಾ ಕುಲಕರ್ಣಿ ಸಂಯೋಜಿಸಿದರು. ಡಾ. ಜ್ಯೋತಿ ಜೀವಣ್ಣನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net