

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಹತ್ತು ದಿನಗಳ ಕಾಲ ಆಯೋಜಿಸಿರುವ ಇಂಟರ್ ನ್ಯಾಷನಲ್ ಟ್ರೇಡ್ ಫೇರ್ ‘ಗೃಹಶೋಭೆ’ಗೆ ಶುಕ್ರವಾರ ಚಾಲನೆ ನೀಡಲಾಯಿತು.
ಮಾಜಿ ಸಂಸದ ಪ್ರತಾಪಸಿಂಹ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್ ಅವರು ಮೇಳಕ್ಕೆ ಚಾಲನೆ ನೀಡಿ ಶುಭಕೋರಿದರು.
ಪ್ರತಾಪಸಿಂಹ ಮಾತನಾಡಿ, ಉತ್ಪಾದಕರು ಹಾಗೂ ಗ್ರಾಹಕರನ್ನು ಒಂದೇ ಸೂರಿನಡಿ ತರಲುವ ಗೃಹಶೋಭೆ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ 150ಕ್ಕೂ ಹೆಚ್ಚು ಉತ್ಪಾದಕರು ಆಗಮಿಸಿ ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲಿದ್ದಾರೆ ಎಂದರು.
ಅಯೂಬ್‌ಖಾನ್ ಮಾತನಾಡಿ, ಹಲವಾರು ವರ್ಷದಿಂದ ಗೃಹಶೋಭೆ ಆಯೋಜಿಸಿಕೊಂಡು ಬರಲಾಗುತ್ತಿದೆ. ಒಂದೆರಡು ಬಾರಿ ನಮ್ಮ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿಯೂ ಪ್ರದರ್ಶನ ಆಯೋಜಿಸಲಾಗಿತ್ತು. ಜನರು ವಿಶ್ವಾಸ ಗಳಿಸಿದ್ದು, ಉತ್ಪಾದಕರಿಗೆ ಹಾಗೂ ಗ್ರಾಹಕರಿಗೆ ನೇರ ಸಂಪರ್ಕ ಇದರಿಂದ ಸಾಧ್ಯ ಎಂದು ಹೇಳಿದರು.
ಆಯೋಜಕರಾದ ನಾಗಚಂದ್ರ ಇತರರು ಇದ್ದರು.