ಡಿ.22 ಮತ್ತು 23ರಂದು ಕೃತಕ ಬುದ್ಧಿಮತ್ತೆ ಕುರಿತು ಅಂತಾರಾಷ್ಟ್ರೀಯ ವಿಚಾರಸಂಕಿರಣ

Artificial Intelligence
Published on

ಮೈಸೂರು: ನಗರದ ಎನ್‌ಐಇ ಕಾಲೇಜಿನಲ್ಲಿ ಡಿ.22 ಮತ್ತು 23ರಂದು ಕೃತಕ ಬುದ್ಧಿಮತ್ತೆ ಕುರಿತು ಅಂತಾರಾಷ್ಟ್ರೀಯ ವಿಚಾರಸಂಕಿರಣ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲರಾದ ಡಾ.ರೋಹಿಣಿ ನಾಗಪದ್ಮ ತಿಳಿಸಿದರು.

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆ ಹಂಚಿಕೊಳ್ಳಲು ಮತ್ತು ಚರ್ಚಿಸಲೆಂದು ಸಂಶೋಧಕರು, ಉದ್ಯಮಿಗಳು, ವೈದ್ಯರು, ಉದ್ಯಮ ತಜ್ಞರು ಮತ್ತು ಉತ್ಸಾಹಿಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಈ ವಿಚಾರಸಂಕಿರಣ ನಡೆಯುತ್ತಿದೆ. ಡಿ.22ರಂದು ಬೆಳಗ್ಗೆ 9.40ಕ್ಕೆ ಉದ್ಘಾಟನೆಗೊಳ್ಳಲಿದ್ದು, ಕಂಪ್ಯೂಟರ್ ದೃಷ್ಟಿ, ರೊಬಾಟಿಕ್ಸ್, ವರ್ಧಿತ ರಿಯಾಲಿಟಿ, ವರ್ಚುಯಲ್ ರಿಯಾಲಿಟಿ, ನ್ಯುರೋಮಾರ್ಫಿಕ್ಸ್, ಎಂಬೆಡೆಡ್ ಕಂಪ್ಯೂಟಿಂಗ್ ಮೊದಲಾದ ವಿಷಯ ಕುರಿತು ವಿಚಾರ ಮಂಡಿಸಲಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಾ.ಆರ್.ಅನಿತಾ, ಡಾ.ವಿ.ಕೆ.ಅನ್ನಪೂರ್ಣ, ಡಾ.ಬಿ.ಎಸ್.ಜಯಶ್ರೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net