ಸಿರಿಗೆರೆಗೆ ಅಂತಾರಾಷ್ಟ್ರೀಯ ಸ್ಥಾನಮಾನ

hsd sanehalli 24 p2
Published on

ಹೊಸದುರ್ಗ: ಸಿರಿಗೆರೆಯಂತಹ ಪುಟ್ಟ ಹಳ್ಳಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿದ ಕೀರ್ತಿ ಲಿಂಗೈಕ್ಯ ಶಿವಕುಮಾರ ಶ್ರೀಗಳಿಗೆ ಸಲ್ಲುತ್ತದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವಿಶ್ವಬಂಧು ಮರಳಸಿದ್ಧರು ಮಾದಿಗ ಜಾತಿಯಲ್ಲಿ ಜನಿಸಿ ತಮ್ಮ ಸಾಧನೆಯ ಮೂಲಕ ವಿಶ್ವಬಂಧುತ್ವ ಬೆಳೆಸಿದವರು. ಆ ಪರಂಪರೆಯನ್ನು ಹಿರಿಯ ಜಗದ್ಗುರುಗಳು ಮುಂದುವರಿಸಿದರು ಎಂದು ಹೇಳಿದರು.

ಡಾ.ಜಿ.ಎಸ್.ಚಂದ್ರಶೇಖರ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಉಚಿತ ವಸತಿ ನಿಲಯ ಮತ್ತು ಶಾಲೆಗಳನ್ನು ತೆರೆದು ಜಾತಿ ಭೇದವಿಲ್ಲದೆ ಶಿಕ್ಷಣವನ್ನು ನೀಡಿದ ಮಠಗಳಲ್ಲಿ ತರಳಬಾಳು ಮಠ ಪ್ರಮುಖ ಎಂದರು.

ನಾಗರಾಜ್ ವಚನ ಗೀತೆಗಳನ್ನು ಹಾಡಿದರು. ಉಡುಪಿಯ ಆದರ್ಶ ಆಸ್ಪತ್ರೆಯ ಡಾ.ಜಿ.ಎಸ್.ಚಂದ್ರಶೇಖರ್ ನೇತೃತ್ವದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net