ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 3 ಬೆಳ್ಳಿ ಪದಕ

web 4
Published on

ಧಾರವಾಡ: ನೇಪಾಳ ರಾಜಧಾನಿ ಕಠ್ಮಂಡುದಲ್ಲಿ ಜು. 24ರಿಂದ 27ರವರೆಗೆ ನಡೆದ ಇಂಡೋ- ನೇಪಾಳ 5ನೇ ಯೂತ್ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್- 2023 ಗೇಮ್ಸ್‌ನಲ್ಲಿ ಕರ್ನಾಟಕದ ಸ್ಪರ್ಧಿಗಳು ಕ್ಕೆ 3 ಬೆಳ್ಳಿ ಪದಕ ಗೆದ್ದಿದ್ದಾರೆ. ಪ್ಯಾರಾ ಗೇಮ್ಸ್‌ನಲ್ಲಿ ಭಾರತ ಪ್ರತಿನಿಧಿಸಿದ ಧಾರವಾಡ ಜಿಲ್ಲೆಯ ಕೇಶವ ತೆಲಗು ಚಕ್ರ ಎಸೆತದಲ್ಲಿ  ಬೆಳ್ಳಿ, ಯಮನಪ್ಪ ಅರಬಳ್ಳಿ ಗುಂಡುಎಸೆತದಲ್ಲಿ ಬೆಳ್ಳಿ ಹಾಗೂ ಹಜರತ್ ಪಠಾಣ್ ಹ್ಯಾಮರ್ ಥ್ರೋದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
ಸಾಧನೆಗೈದ ಕ್ರೀಡಾಪಟುಗಳಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಕೆಂಪಲಿಂಗಣ್ಣವರ ಹಾಗೂ ಜಿಲ್ಲಾ ಪ್ಯಾರಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net