ಅಂತಾರಾಷ್ಟ್ರೀಯ ಪುರುಷರ ಟೆನಿಸ್ ಟೂರ್ನಿ ಉದ್ಘಾಟನೆ ಇಂದು

tanis
Published on

ಧಾರವಾಡ: ಜಿಲ್ಲಾ ಟೆನಿಸ್ ಅಸೋಸಿಯೇಶನ್ ಆತಿಥ್ಯದಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಪುರುಷರ ಟೆನಿಸ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ಅ. 17ರಂದು ಬೆಳಗ್ಗೆ 8.30 ಗಂಟೆಗೆ ಜಿಲ್ಲಾ ಟೆನಿಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕ್ರೀಡಾ ಹಾಗೂ ಯುವಸಬಲೀಕರಣ ಸಚಿವ ಬಿ. ನಾಗೇಂದ್ರ, ಶಾಸಕರಾದ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ವಿಶೇಷ ಅತಿಥಿಯಾಗಿ ಭಾಗವಹಿಸುವರು.
ಅ. 15 ಮತ್ತು 16ರಂದು ಅರ್ಹತಾ ಸುತ್ತುಗಳನ್ನು ಆಡಿಸಲಾಗಿದೆ. ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದ್ದು, 17ರಿಂದ 22ರವರೆಗೆ ಮುಖ್ಯ ಪಂದ್ಯಾವಳಿಗಳು ನಡೆಯಲಿವೆ. 21ರಂದು ಡಬಲ್ಸ್ ಫೈನಲ್ಸ್ ಮತ್ತು 22ರಂದು ಸಿಂಗಲ್ಸ್ ಫೈನಲ್ಸ್ ಪಂದ್ಯಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net