ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ

21 SANDOOR 06
ಸಂಡೂರು ಬಿಕೆಜಿ ಸಮೂಹ ಸಂಸ್ಥೆಯವತಿಯಿಂದ ಆಯೋಜಿಸಿದ್ದ ಯೋಗಾಸನ ಸಮಾರೋಪ ಸಮಾರಂಭದಲ್ಲಿ ಸಂಸ್ಥೆ ಪಾಲುದಾರ ಬಿ.ನಾಗನಗೌಡ, ಯೋಗ ಶಿಕ್ಷಕರಾದ ತುಮಟಿ ಶ್ರೀನಿವಾಸ, ಶಿಲ್ಪಾ, ಬಿಕೆಜಿಯ ಅಧಿಕಾರಿಗಳಾದ ಎಚ್.ಆರ್.ರಾಜಶೇಖರ ಬೆಲ್ಲದ್, ಪ್ರಮೋದ್ ರಿತ್ತಿ ಇತರರಿದ್ದರು.
Published on

ಸಂಡೂರು: ಯೋಗಾಭ್ಯಾಸ ಮನುಷ್ಯನನ್ನು ದೈಹಿಕ, ಮಾನಸಿಕವಾಗಿ ಸಶಕ್ತಗೊಳಿಸುತ್ತದೆ ಎಂದು ಬಿಕೆಜಿ ಸಮೂಹ ಸಂಸ್ಥೆ ಪಾಲುದಾರ ಬಿ.ನಾಗನಗೌಡ ಹೇಳಿದರು.

ಬಿಕೆಜಿ ಸಮೂಹ ಸಂಸ್ಥೆಗಳವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಬಿಕೆಜಿ ಒಳಾಂಗಣ ಕಚೇರಿಯಲ್ಲಿ ಆಯೋಜಿಸಿದ್ದ ಶನಿವಾರ ಆಯೋಜಿಸಿದ್ದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು.

ದಿನ ನಿತ್ಯ ಯೋಗ ಮಾಡುವುದರ ಮೂಲಕ ಆರೋಗ್ಯವಾಗಿರಬಹುದು. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಇದ್ದ ಯೋಗ ಜೀವನಶೈಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಒಂದು ಭೂಮಿ ಒಂದು ಆರೋಗ್ಯ ಎಂಬ ಘೋಷವಾಕ್ಯ ಅರ್ಥಪೂರ್ಣವಾಗಿದೆ ಎಂದರು. ಜೂ.10ರಿಂದ ಜೂ.20ವರೆಗೆ ಯೋಗ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಯೋಗ ಶಿಕ್ಷಕ ತುಮಟಿ ಶ್ರೀನಿವಾಸ್ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net