

ಶ್ರವಣ್‌ಕುಮಾರ್ ನಾಳ, ಮಂಗಳೂರು
ಟೀಮ್ ಮಂಗಳೂರು ಸಹಯೋಗದಲ್ಲಿ ಕಡಲನಗರಿಯಲ್ಲಿ 3 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ವೇದಿಕೆ ಸಿದ್ಧಗೊಂಡಿದೆ.
2023ರ ಬಳಿಕ ಜಿಲ್ಲಾಡಳಿತದ ಅನುದಾನ ಕೊರತೆ ಮತ್ತು ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವು ಈ ಬಾರಿ ತಣ್ಣೀರುಬಾವಿ ಬೀಚ್‌ನಲ್ಲಿ ಆಯೋಜನೆಗೊಳ್ಳುತ್ತಿದ್ದು, ಇದೇ ಮೊದಲಬಾರಿ ಅಂತಾರಾಷ್ಟ್ರೀಯ ಕಾರ್ಯಕ್ರಮವೊಂದಕ್ಕೆ ತಣ್ಣೀರುಬಾವಿ ಬೀಚ್ ಸಿದ್ಧಗೊಳ್ಳುತ್ತಿದೆ. ಮಲೇಷಿಯಾ, ಇಂಡೋನೇಷ್ಯ, ಗ್ರೀಸ್, ಸ್ಪೀಡನ್, ಉಕ್ರೇನ್, ಥೈಲ್ಯಾಂಡ್, ವಿಯೇಟ್ನಾಂ, ಇಸ್ಟೋನಿಯ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸುವ ಸಾಧ್ಯತೆ ಇದೆ.
*ಅಂತಾರಾಷ್ಟ್ರೀಯ ಪ್ರತಿನಿಧಿಗಳು ಭಾಗಿ:
ಹೊಸ ವರ್ಷಾರಂಭದಲ್ಲೇ ಅಂತಾರಾಷ್ಟ್ರೀಯ ಕೈಟ್ ೆಸ್ಟ್ ಹಮ್ಮಿಕೊಳ್ಳಲಾಗಿದ್ದು, ದೇಶ-ವಿದೇಶಿ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ತಣ್ಣೀರುಬಾವಿ ಬೀಚ್ ಕೇಂದ್ರೀಕೃತವಾಗಿ ಜ.18 ಮತ್ತು 19ರಂದು ನಡೆಸಲು ಚಿಂತನೆ ನಡೆಸಲಾಗಿದ್ದು, ವಿದೇಶಿ ಪ್ರತಿನಿಧಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಭಾರತ ಹೊರತುಪಡಿಸಿ ಸ್ಲೊವೇನಿಯಾ, ಬೆಲ್ಜಿಯಂ, ಯು.ಕೆ., ಜರ್ಮನಿ, ಎಸ್ಟೋನಿಯಾ, ಇಟಲಿ, ಮಲೇಷ್ಯಾ, ಸಿಂಗಾಪುರ, ಗ್ರೀಸ್ ತಂಡಗಳು ಸೇರಿದಂತೆ ಸುಮಾರು 15ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಗಾಳಿಪಟ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
*ಜನಾಕರ್ಷಣೆಯ ಕೈಟ್‌ಗಳ ಪ್ರದರ್ಶನ:
ಒಂದು ಗಾಳಿಪಟವನ್ನು ಎರಡು ಹಗ್ಗಗಳ ಮೂಲಕ ಹಾರಿಸುವ ಮೂಲಕ ಜನಾಕರ್ಷಣೆ ಪಡೆದ ‘ಸ್ಟಂಟ್ ಕೈಟ್’ ಈ ಬಾರಿಯ ಉತ್ಸವದಲ್ಲಿ ಆಕರ್ಷಣೆ ಪಡೆಯುವ ಸಾಧ್ಯತೆ ಇದೆ. ಯು.ಕೆ., ್ರಾನ್ಸ್, ಥೈಲ್ಯಾಂಡ್ ಮುಂತಾದ ಕಡೆ ಗಮನಸೆಳೆದಿರುವ ಸ್ಟಂಟ್ ಕೈಟ್ ಮಂಗಳೂರಿನಲ್ಲಿಯೂ ಪ್ರದರ್ಶನಗೊಳಿಸುವ ನಿಟ್ಟಿನಲ್ಲಿ ಈ ತಂಡಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಾಗುತ್ತಿದೆ. ಅದೇ ರೀತಿ, ಸಿಂಗಾಪುರದ ಡ್ರೋನ್ ಕೈಟ್ ತಂಡವೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ. ಜತೆಗೆ ಫೋರ್ ಲೇನ್ ಕೈಟ್ ತಂಡ, ರೆವೆಲ್ಯೂಷನ್ ಕೈಟ್‌ಗಳು ಈ ಬಾರಿಯ ಪ್ರಮುಖ ಆಕರ್ಷಣೆ.
ಗುಜರಾತ್-ಮಂಗಳೂರಿನಲ್ಲಿ ಉತ್ಸವ
ಈ ಹಿಂದೆ ಮಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ 8 ದೇಶಗಳ 13 ಮಂದಿ ಪ್ರತಿನಿಧಿಗಳು ಭಾಗಿಯಾಗಿದ್ದರು. ಅದೇ ರೀತಿ ಭಾರತದ ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಕೇರಳ, ತಮಿಳುನಾಡು, ಒರಿಸ್ಸಾ, ರಾಜ್‌ಕೋಟ್, ಮುಂಬೈ, ಸೂರತ್, ಅಹ್ಮದಾಬಾದ್ ಸೇರಿದಂತೆ ಸುಮಾರು 20 ಮಂದಿ ಪ್ರತಿನಿಧಿಗಳು ಉತ್ಸವಕ್ಕೆ ಆಗಮಿಸಿದ್ದರು. ಮಂಗಳೂರಿನಲ್ಲಿ ಈ ಬಾರಿ ಉತ್ತರಾಯಣದಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿರುವುದರಿಂದ ಇದಕ್ಕೂ ಮುನ್ನ ಗುಜರಾತ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಜನವರಿ ಮೊದಲ ವಾರ ಗುಜರಾತ್‌ನಲ್ಲಿ ಸುಮಾರು 10 ದಿನಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವ ನಡೆಯುತ್ತದೆ. ಈ ಉತ್ಸವಕ್ಕೆ ಆಗಮಿಸುವ ವಿದೇಶಿ ಪ್ರತಿನಿಧಿಗಳಲ್ಲಿ ಕೆಲ ಮಂದಿ ಮಂಗಳೂರಿಗೂ ಆಗಮಿಸುವ ನಿರೀಕ್ಷೆ ಇದೆ.
ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಈಗಾಗಲೇ ಜನಾಕರ್ಷಣೆ ಪಡೆದುಕೊಂಡಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಕಾರ್ಯಕ್ರಮ. ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಾಧ್ಯವಾದಷ್ಟು ಪ್ರವಾಸೋದ್ಯಮ ಇಲಾಖೆಯಿಂದಲೂ ಸಹಕಾರ ನೀಡಲಾಗುವುದು.
ರಶ್ಮಿ ಎಸ್.ಆರ್., ಉಪನಿರ್ದೇಶಕ (ಪ್ರಭಾರ), ಪ್ರವಾಸೋದ್ಯಮ ಇಲಾಖೆ, ಮಂಗಳೂರು
ಪ್ರವಾಸೋದ್ಯಮಕ್ಕೆ ಪೂರಕವಾದ ಅಂತಾರಾಷ್ಟ್ರೀಯ ಕಾರ್ಯಕ್ರಮಕ್ಕೆ ಕಡಲನಗರಿ ತೆರೆದುಕೊಳ್ಳಲಿದೆ. ಈ ಬಾರಿಯ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಜನವರಿ 18 ಮತ್ತು 19ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಆಯೋಜನೆಗೆ ಸಿದ್ಧತೆ ನಡೆಯುತ್ತಿದೆ. ಉತ್ಸವದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಉತ್ಸವ ಆಯೋಜನೆಗೆ ಸುಮಾರು 35 ಲಕ್ಷ ರೂ. ಅನುದಾನ ಬೇಕಿದೆ.
ಸರ್ವೇಶ್ ರಾವ್, ಟೀಂ ಮಂಗಳೂರು ಸ್ಥಾಪಕರು.
ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಎಂಬುವುದು ಮಂಗಳೂರಿನ ಪ್ರಮುಖ ಕಾರ್ಯಕ್ರಮಗಳಲ್ಲೊಂದು. ಕೋವಿಡ್ ಕಾರಣ ಕಾರಣದಿಂದ ಕಳೆದ ಕೆಲ ವರ್ಷಗಳಿಂದ ಈ ಕಾರ್ಯಕ್ರಮಕ್ಕೆ ಹಿನ್ನಡೆಯಾಗಿತ್ತು. ಈ ಉತ್ಸವ ವ್ಯವಸ್ಥಿತವಾಗಿ, ವಿಜೃಂಭಣೆಯಿಂದ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಜತೆ ಮಾತುಕತೆ ನಡೆಸುತ್ತೇನೆ. ಉತ್ಸವ ಆಯೋಜನೆಗೆ ಸಂಬಂಧಿಸಿದಂತೆ ಸೂಕ್ತ ಅನುದಾನಕ್ಕಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ.
- ಡಿ.ವೇದವ್ಯಾಸ ಕಾಮತ್, ಶಾಸಕರು