ಆ.5ರಿಂದ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ

International karate tournament
ರಾಜ್ಯ ಕರಾಟೆ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶಿವಮೊಗ್ಗ ವಿನೋದ್ ವೇಳಾಪಟ್ಟಿ ಬಿಡುಗಡೆ ಮಾಡಿದರು. ಪ್ರಮುಖರಾದ ರಾಘವೇಂದ್ರ, ಬಾಲರಾಜ್, ಪಂಚಪ್ಪ, ಮಂಜುಳಾ, ನವೀನ್, ಹರ್ಷಿತ್, ಅನೂಪ್ ಇದ್ದರು.
Published on

ಶಿವಮೊಗ್ಗ: ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ ಹಾಗೂ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಸಹಯೋಗದಲ್ಲಿ ಶಿವಮೊಗ್ಗ ಮುಕ್ತ 4ನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯನ್ನು ಆಗಸ್ಟ್ 5 ಮತ್ತು 6ರಂದು ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯ ಕರಾಟೆ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶಿವಮೊಗ್ಗ ವಿನೋದ್ ತಿಳಿಸಿದರು.

ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ಎಲ್ಲ ಸಿದ್ಧತೆ ನಡೆಯುತ್ತಿದ್ದು ಈ ಪಂದ್ಯಾವಳಿಯಲ್ಲಿ ಅಮೆರಿಕ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ, ಮಲೇಷ್ಯಾದಿಂದಲೂ ಕ್ರೀಡಾಪಟುಗಳು ಆಗಮಿಸಲಿದ್ದು ದೇಶದ 14 ರಾಜ್ಯಗಳಿಂದ 2 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಆಗಮಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಂದ್ಯಾವಳಿಯಲ್ಲಿ 7ರಿಂದ 18 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಕಟಾ, ಕುಮಟಿ ವಿಭಾಗದಲ್ಲಿ ಪಂದ್ಯ ನಡೆಯಲಿದೆ. ವಿಶೇಷವಾಗಿ ಜಿಲ್ಲೆಯಿಂದ 300ಕ್ಕೂ ಅಧಿಕ ಸ್ಥಳೀಯ ಕ್ರೀಡಾಪಟುಗಳು ಭಾಗವಹಿಸುವರು ಎಂದು ಹೇಳಿದರು.
ಕರಾಟೆ ಸಂಸ್ಥೆಯ ಪ್ರಮುಖರಾದ ರಾಘವೇಂದ್ರ, ಬಾಲರಾಜ್, ಪಂಚಪ್ಪ, ಮಂಜುಳಾ, ನವೀನ್, ಹರ್ಷಿತ್, ಅನೂಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net