ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್,  ಹುಬ್ಬಳ್ಳಿಯಲ್ಲಿ 25ರಿಂದ ಆಯೋಜನೆ

Published on

ಹುಬ್ಬಳ್ಳಿ: ಗೋಜು ರ್ಯೂ ಕರಾಟೆ ಡು ಕೆನ್ರ್ಯೂ ಕಾನ್ ಇಂಡಿಯಾ ಟ್ರಸ್ಟ್ ವತಿಯಿಂದ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ ಅನ್ನು ಅ. 25ರಿಂದ ಮೂರು ದಿನಗಳವರಗೆ ನಗರದ ಗೋಕುಲ ರಸ್ತೆ ವಾಸವಿ ಮಹಲ್ ನಲ್ಲಿ ಆಯೋಜಿಸಲಾಗಿದೆ.

ವಿಆರ್ ಎಲ್, ಸ್ವರ್ಣ ಗ್ರುಪ್, ಶ್ರೀಯಾ ಪ್ರಾಪಟಿರ್ಸ್ ಸೇರಿ ವಿವಿಧ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಆಯೋಜಿಸಿರುವ ಕರಾಟೆ ಸ್ಪರ್ಧೆಯನ್ನು ಅ. 25ರಂದು ಸಂಜೆ 5ಕ್ಕೆ ಶಿರೂರ ಪಾರ್ಕ್ ಅಯ್ಯಪ್ಪಸ್ವಾಮಿ ದೇವಸ್ಥಾನದ ಆನಂದ ಗುರುಸ್ವಾಮಿ ಅವರು ಉದ್ಘಾಟಿಸುವರು.

ವಿಆರ್ ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ಸ್ವರ್ಣ ಗ್ರುಪ್ಸ್ ಎಂಡಿ ಡಾ. ವಿ.ಎಸ್.ವಿ. ಪ್ರಸಾದ, ಮಲೇಷಿಯಾದ ರೆರಿ ಸೋಕ್ ಅನಂತನ್, ಸೆನ್ಸಾಯ್ ಶ್ರೀಕಾಂತ ಮಲ್ಲೂರ, ನವೀನ ನಾಗಪ್ಪ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು.

ಭಾರತ ಸೇರಿದಂತೆ ನಾಲ್ಕು ದೇಶಗಳ ಸುಮಾರು 2500 ಕರಾಟೆ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ಮುಖ್ಯ ತಾಂತ್ರಿಕ ನಿರ್ದೇಶಕ ಹನ್ಸಿ ಅಣ್ಣಪ್ಪಾ ಮರಕಾಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net