

ಮಂಗಳೂರು: ಸೆಲ್ಪ್ ಡಿೆನ್ಸ್ ಸ್ಕೂಲ್ ಆ್ ಇಂಡಿಯನ್ ಕರಾಟೆ ಮಂಗಳೂರು ಡೊಜೊ ವತಿಯಿಂದ ಇಂಟರ್ ನ್ಯಾಶನಲ್ ಕರಾಟೆ ಚಾಂಪಿಯನ್ ಶಿಪ್- 2024 ಮಂಗಳೂರಿನಲ್ಲಿ ನಡೆಯಲಿದ್ದು, ಇದರ ಕಚೇರಿ ಉದ್ಘಾಟನೆ ಕಾರ್ಯಕ್ರಮ ಶುಕ್ರವಾರ ನಗರದ ಬಲ್ಮಠದ ಲ್ಯಾಂಡ್ಸ್ ಟ್ರೇಡ್ ಮೈಲ್‌ಸ್ಟೋನ್ ಕಟ್ಟಡದಲ್ಲಿ ನಡೆಯಿತು.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಕಚೇರಿ ಉದ್ಘಾಟಿಸಿ ಮಾತನಾಡಿ, ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾಟ ಆಯೋಜಿಸುತ್ತಿದ್ದು, ಸೆಲ್ಪ್ ಡಿೆನ್ಸ್ ಸ್ಕೂಲ್ ಆ್ ಇಂಡಿಯನ್ ಕರಾಟೆ ಮಂಗಳೂರು ಡೊಜೊ ಇದರ 50ನೇ ವರ್ಷಾಚರಣೆ ಹಿನ್ನೆಲೆ ‘ಶೌರ್ಯ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್’ ಕುಲಶೇಖರದ ಸೆ. 6 , 7, 8 ರಂದು ನಗರದ ಕೂರ್ಡೇಲ್ ಚರ್ಚ್ ಹಾಲ್ನಲ್ಲಿ ನಡೆಯಲಿದೆ ಮೈದಾನದಲ್ಲಿ ಮೂರುದಿನಗಳ ಕಾಲ ನಡೆಯಲಿದೆ. ಸುಮಾರು 10 ರಷ್ಟು ಅಂತಾರಾಷ್ಟ್ರೀಯ ಕರಾಟೆ ತಂಡಗಳು ಸೇರಿದಂತೆ ದೇಶದ ನಾನಾ ಭಾಗಗಳಿಂದ ತಂಡಗಳು ಭಾಗವಹಿಸಲಿದೆ. 3 ಸಾವಿರಕ್ಕೂ ಅಧಿಕ ಕರಾಟೆ ಪಟುಗಳು ಭಾಗವಹಿಸುವ ನಿರೀಕ್ಷೆಯಿದ್ದು, 800 ಮಂದಿ ನೋಂದಣಿ ಮಾಡಿದ್ದಾರೆ. ಈ ತಿಂಗಳ ಆ.31ರವರೆಗೆ ಸ್ಪರ್ಧಾಳುಗಳು ತಮ್ಮ ಹೆಸರು ನೋಂದಾಯಿಸಬಹುದು. ಪಂದ್ಯಾವಳಿ ನಡೆದ ಬಳಿಕ ರಾತ್ರಿ ಸಭಾಂಗಣದಲ್ಲಿ ಕರಾವಳಿಯ ಸಂಸ್ಕೃತಿ ಹಾಗೂ ಭಾರತದ ನಾನಾ ಭಾಗಗಳ ಸಾಂಸ್ಕೃತಿಕ ಕಾರ್ಯಗಳ ಪರಿಚಯದ ಕಾರ್ಯಕ್ರಮ ಹಾಗೂ ಆಹಾರಮೇಳ ಸೇರಿದಂತೆ ವೈಶಿಷ್ಟ್ಯ ಕಾರ್ಯಕ್ರಮ ಜರಗಲಿದೆ. ಕರಾಟೆ ಪಟುಗಳಿಗೆ, ಹಾಗೂ ಅಂತರಾಷ್ಟ್ರೀಯ, ರಾಷ್ಟ್ರೀಯ ತೀರ್ಪುಗಾರರಿಗೆ ಮೂರು ದಿನಗಳ ವಸತಿ ಹಾಗೂ ಉಟೋಪಾಚರಗಳನ್ನು ಉಚಿತವಾಗಿ ನೀಡಲು ವ್ಯವಸ್ಥೆಯಿದೆ. ಸೆಲ್ಪ್ ಡಿೆನ್ಸ್ ಸ್ಕೂಲ್ ಆ್ ಇಂಡಿಯನ್ ಕರಾಟೆ ಮಂಗಳೂರು ಡೊಜೊ ಕೇಂದ್ರವು ಸಮರ ಕಲೆಗಳ ಮೂಲಕ ದೈಹಿಕ ಸಾಮಾರ್ಥ್ಯ, ಶಿಸ್ತು, ಸ್ವರಕ್ಷಣಾ ಹಾಗೂ ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವ ಕಾರ್ಯವನ್ನು ಮಾಡುತ್ತಾ ಬಂದಿದೆ ಎಂದರು.
ಈ ಸಂದರ್ಭ ಕ್ರೀಡೋತ್ಸವ ಸಮಿತಿಯ ಡೈರೆಕ್ಟರ್ ಜನರಲ್ ಕಿಯೋಸಿ ಸುರೇಂದ್ರ ಬಿ., ಸಂಸ್ಥೆಯ ಪೋಷಕ ತೇಜೋಮಯ, ಟಿಕ್ನಿಕಲ್ ಡೈರೆಕ್ಟರ್ ಸುರೇಶ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸೂರಜ್ ಕುಮಾರ್ ಶೆಟ್ಟಿ, ರಾಜ್‌ಗೋಪಾಲ್ ರೈ, ಮಾಧ್ಯಮ ಸಂಯೋಜಕ ಎಲಿಯಾಸ್ ೆರ್ನಾಂಡಿಸ್ ಉಪಸ್ಥಿತರಿದ್ದರು.