

ಮಡಿಕೇರಿ:
ಮಡಿಕೇರಿಯ ಕೋಟೆ ಆವರಣ, ಪಾಡಿನಾಡಿನ ಯವಕಪಾಡಿಯ ನಾಲ್ ನಾಡ್ ಅರಮನೆ ಮತ್ತು ದೇವಟ್‌ಪರಂಬ್ ನರಮೇಧದ ಸ್ಮಾರಕ ಸ್ಥಳದಲ್ಲಿ ಅಂತರರಾಷ್ಟಿçÃಯ ಹತ್ಯಾಕಾಂಡದ ದಿನವನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಶನಿವಾರ ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಿಎನ್‌ಸಿ ಮುಖಂಡ ಎನ್.ಯು. ನಾಚಪ್ಪ ಕೆಳದಿ, ಹಾಲೇರಿ ಅರಸರಿಂದ ಮಡಿಕೇರಿ ಕೋಟೆಯಲ್ಲಿ ನಡೆದ ರಾಜಕೀಯ ಹತ್ಯೆಗಳು, ನಾಲ್ನಾಡ್ ಅರಮನೆಯಲ್ಲಿ ಕೆಳದಿ, ಹಾಲೇರಿ ಆಡಳಿತಗಾರರಿಂದ ಕೊಡವ ಬುಡಕಟ್ಟು ಜನಾಂಗದ ಮಂದಿಗೆ ಅಮಾನವೀಯ ಮರಣದಂಡನೆ ಮತ್ತು ದೇವಟ್ ಪರಂಬು ನರಮೇಧ ಈ ಮೂರು ದುರಂತ ಕೃತ್ಯಗಳನ್ನು ಅಂತಾರಾಷ್ಟಿçÃಯ ಹತ್ಯಾಕಾಂಡದ ನೆನಪಿನ ಪಟ್ಟಿಯಲ್ಲಿ ಸೇರಿಸಬೇಕು. ಕೊಡವರು ಹತ್ಯೆಗೀಡಾದ ಮೂರೂ ಪ್ರದೇಶದಲ್ಲಿ ಸ್ಮಾರಕ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಅರಮನೆಗಳು ಮತ್ತು ದೇವಟ್‌ಪರಂಬ್‌ನಲ್ಲಿ ನಡೆದ ಮೂರು ದುರಂತ ನರಮೇಧಗಳನ್ನು ಕೊಡವ ಬುಡಕಟ್ಟು ಜನಾಂಗ ಮರೆಯಲು ಸಾಧ್ಯವಿಲ್ಲ. ಕೊಡವ ಜನಾಂಗೀಯ ಇತಿಹಾಸದಲ್ಲಿ ಈ ಆಘಾತಕಾರಿ ಅಧ್ಯಾಯವನ್ನು ನೆನಪಿಸಿಕೊಳ್ಳಲಾಗುತ್ತದೆ ಮತ್ತು ಮುಂದಿನ ಪೀಳಿಗೆಗೆ ರವಾನಿಸಲಾಗುತ್ತದೆ ಎಂದರು.
ಚೋಳಪAಡ ಜ್ಯೋತಿ ನಾಣಯ್ಯ, ಕಾಂಡೇರ ಸುರೇಶ್, ಪಟ್ಟಮಾಡ ಕುಶ, ಆಲಮಂಡ ಜೈ, ಚೋಳಪಂಡ ನಾಣಯ್ಯ, ಪುಟ್ಟಿಚಂಡ ಡಾನ್ ದೇವಯ್ಯ, ಅಜ್ಜಿಕುಟ್ಟೀರ ಲೋಕೇಶ್, ಪುಲ್ಲೇರ ಕಾಳಪ್ಪ, ಮಣವಟ್ಟೀರ ಚಿಣ್ಣಪ್ಪ ಮತ್ತಿತರರು ಇದ್ದರು.