26ರಂದು ಬೃಹತ್​ ಉದ್ಯೋಗ ಮೇಳ ಆಯೋಜನೆ ಅಂತಾರಾಷ್ಟ್ರೀಯ ದೈತ್ಯ ಕಂಪನಿ ಫಾಕ್ಸ್​ ಕಾನ್

International giant Foxconn to host massive job fair on 26th
Published on

ವಿಜಯಪುರದ: ಬಿಎಲ್​ಡಿಇ ಸಂಸ್ಥೆ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಇಂಜನಿಯರಿಂಗ್​ ಕಾಲೇಜಿನಲ್ಲಿ ಸೆ. 26 ರಂದು ಇಂಜಿನಿಯರಿಂಗ್​ ಮತ್ತು ಡಿಪ್ಲೊಮಾ ಪಾಸಾದ ವಿದ್ಯಾರ್ಥಿಗಳಿಗಾಗಿ ಬೃಹತ್​ ಉದ್ಯೋಗ ಮೇಳ ಆಯೋಜಿಸಿದೆ.2024 ಮತ್ತು 2025 ನೇ ಶೈಣಿಕ ವರ್ಷದಲ್ಲಿ ಬಿಇ ಮತ್ತು ಡಿಪ್ಲೊಮಾ ಪದವಿಯ ಮೆಕ್ಯಾನಿಕಲ್​, ಇಲೆಕ್ಟ್ರಾನಿಕ್ಸ್​ ಕಮ್ಯೂನಿಕೇಶನ್​ ಮತ್ತು ಇಲೆಕ್ಟ್ರಾನಿಕ್ಸ್​ ಇಲೆಕ್ಟ್ರಿಕಲ್ಸ್​ ವಿಭಾಗಗಳಲ್ಲಿ ತೇರ್ಗಡೆ ಹೊಂದಿರುವ ವಿಜಯಪುರ ಹಾಗೂ ಸುತ್ತಲಿನ ಪ್ರದೇಶಗಳ ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡು, ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಅಂತಾರಾಷ್ಟ್ರೀಯ ಬೃಹತ್​ ಸಂಸ್ಥೆಯಾಗಿರುವ ಫಾಕ್ಸ್​ ಕಾನ್​ ಜಗತ್ತಿನಲ್ಲಿಯೇ ಐಪೋನ್​ ತಯಾರಿಕೆಯಲ್ಲಿ ಅಗ್ರಗಣ್ಯ ಸಂಸ್ಥೆಯಾಗಿದ್ದು, ಬೆಂಗಳೂರಿನ ದೇವನಹಳ್ಳಿಯಲ್ಲಿ ನೂತನ ಬೃಹತ್​ ತಯಾರಿಕಾ ಟಕ ಕಾರ್ಯಾರಂಭ ಮಾಡುತ್ತಿರುವ ಹಿನ್ನೆಲೆಯಲ್ಲಿ, ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವರು ಹಾಗೂ ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು, ಫಾಕ್ಸ್​ ಕಾನ್​ ಆಡಳಿತ ಮಂಡಳಿಗೆ ವಿಜಯಪುರ ಹಾಗೂ ಸುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ತಮ್ಮ ಕಂಪನಿಯಲ್ಲಿ ಹೆಚ್ಚಿನ ಅವಕಾಶ ನೀಡಬೇಕು ಎಂದು ಕೋರಿದ ಹಿನ್ನೆಲೆಯಲ್ಲಿ ಫಾಕ್ಸ್​ ಕಾನ್​ ಸಂಸ್ಥೆಯ ಅಧಿಕಾರಿಗಳು ಖುದ್ದು ವಿಜಯಪುರಕ್ಕೆ ಆಗಮಿಸಿ, ವಿದ್ಯಾರ್ಥಿಗಳ ಸಂದರ್ಶನ ನಡೆಸುವ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಿದ್ದಾರೆ.

ಅಂದು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಉದ್ಯೋಗ ಮೇಳ ನಡೆಯಲಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮಹಾವಿದ್ಯಾಲಯಕ್ಕೆ ಸಂಪರ್ಕಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯಪುರದ ಬಿಎಲ್​ಡಿಇ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಬೃಹತ್​ ಉದ್ಯೋಗ ಮೇಳ ಆಯೋಜಿಸುವ ಹಿನ್ನೆಲೆಯಲ್ಲಿ ಪೂರ್ವ ಭಾವಿ ಸಭೆ ನಡೆಯಿತು. ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ, ಇತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net