ಅಂತಾರಾಷ್ಟ್ರೀಯ ಜಿನಿವಾ ಒಪ್ಪಂದ ದಿನಾಚರಣೆ

REDCROSS
ವಿಜಯಪುರದ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಜಿನಿವಾ ಒಪ್ಪಂದ ದಿನ ಆಚರಣೆಯಲ್ಲಿ ಶರದ ರೋಡಗಿ ಮಾತನಾಡಿದರು. ಡಾ.ವೈ.. ತಮ್ಮಣ್ಣ, ಡಾ. ಕೆ.ಎ. ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಶನಿವಾರ ಅಂತಾರಾಷ್ಟ್ರೀಯ ಜಿನಿವಾ ಒಪ್ಪಂದ ದಿನ ಆಚರಿಸಲಾಯಿತು.

ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಶರದ ರೋಡಗಿ ಮಾತನಾಡಿ, 16ನೇ ಶತಮಾನದಲ್ಲಿ ಯೂರೋಪದಲ್ಲಿ ನಡೆದ ಯುದ್ಧ ಸಂದರ್ಭದಲ್ಲಿ ಯುದ್ಧ ಗಾಯಾಳುಗಳ ಸೇವೆಗಾಗಿ ರೆಡ್‌ಕ್ರಾಸ್ ಸಂಸ್ಥೆಯ ಕೊಡುಗೆಯ ಬಗ್ಗೆ ಸಭೆಗೆ ತಿಳಿಸಿದರು.

ಮಾನವೀಯ ಮೌಲ್ಯಗಳು ಯಾವುದೇ ದೇಶ, ಜಾತಿ, ಪಂಗಡವನ್ನು ಅವಲಂಬಿಸಿಲ್ಲ. ಯುದ್ಧ ಗಾಯಾಳುಗಳನ್ನು ಹಾಗೂ ಯುದ್ಧ ಕೈದಿಗಳನ್ನು ಮಾನವೀಯತೆಯ ತಳಹದಿಯ ಮೇಲೆ ಅವರನ್ನು ಕಾಪಾಡುವುದು ಎಲ್ಲ ರಾಷ್ಟ್ರಗಳ ಕರ್ತವ್ಯವಾಗಬೇಕು ಎಂಬ ಉದ್ದೇಶವನ್ನು ಜಿನಿವಾ ಒಪ್ಪಂದ ಹೊಂದಿದೆ ಎಂದು ಅಭಿಪ್ರಾಯಿಸಿದರು.

ಪ್ರಾಚಾರ್ಯ ಡಾ.ವೈ.. ತಮ್ಮಣ್ಣ ಅಧ್ಯಕ್ಷತೆ ವಹಿಸಿದ್ದರು. ಯೂತ್ ರೆಡ್ ಕ್ರಾಸ್ ಮುಖ್ಯಸ್ಥ ಡಾ. ಕೆ.ಎ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸವಿತಾ ಲಮಾಣಿ ನಿರೂಪಿಸಿದರು. ಡಾ. ಬಿ.ಎಸ್. ಸಂದೇಶ ಸ್ವಾಗತಿಸಿದರು ಮತ್ತು ಮೆಹಬೂಬಸಾಬ ಜಮಾದಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net