ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

film
Published on

ಮೈಸೂರು: ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ನ.19 ಮತ್ತು 20 ರಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲಾಗಿದೆ.

ಚಲನಚಿತ್ರಗಳ ನಟ, ನಟಿಯರನ್ನಷ್ಟೇ ಎಲ್ಲರೂ ಗಮನಿಸುತ್ತಾರೆ. ಆದರೆ ತಾಂತ್ರಿಕ ವರ್ಗದವರನ್ನೂ ಗುರುತಿಸುವ ಕೆಲಸ ಈ ಚಲನ ಚಿತ್ರೋತ್ಸವದಲ್ಲಿ ಮಾಡಲಾಗುತ್ತಿದೆ. ಈ ವೇಳೆ 18 ರಿಂದ 20 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಆಯೋಜಕ ವೈ.ಕೆ.ರಾಮಮೂರ್ತಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನ.19 ರಂದು ಬೆಳಗ್ಗೆ 9.30ಕ್ಕೆ ಚಿತ್ರೋತ್ಸವ ಉದ್ಘಾಟನೆಗೊಳ್ಳಲಿದ್ದು, ಡಾ. ರಾಜ್‌ಕುಮಾರ್ ಕುಟುಂಬ ವರ್ಗ, ಗಿರಿಜಾ ಲೋಕೇಶ್, ಮಂಡ್ಯ ರಮೇಶ್ ಇತರು ಭಾಗವಹಿಸಲಿದ್ದಾರೆ. ನ.20 ರ ಸಂಜೆ 6ಕ್ಕೆ ವಿವಿಧ ಚಲನಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಲ್ಲದೆ, ಹಲವಾರು ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿವೆ ಎಂದು ಹೇಳಿದರು.
ಆಯೋಜಕರಾದ ರಂಜಿತಾ ಸುಬ್ರಹ್ಮಣ್ಯ, ಇಂದಿರಾ ನಾಯರ್, ನಾಗರತ್ನ, ರಂಜಿನಿ, ವಂದನಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net