ಜನಸಾಮಾನ್ಯರಿಗೆ ಮೂರ್ಛೆ ರೋಗದ ಅರಿವು ಅಗತ್ಯ

Apasmaara Lead
Published on

ಹಿರಿಯ ಶಿಕ್ಷಕಿ ಇಂದಿರಾ ಅನಿಸಿಕೆ

ಅಂತಾರಾಷ್ಟ್ರೀಯ ಅಪಸ್ಮಾರ ರೋಗ ದಿನ

ವಿಜಯವಾಣಿ ಸುದ್ದಿಜಾಲ ಉಡುಪಿ

ಮೂರ್ಛೆ ರೋಗ ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ ಸಹ ಕೆಲವೊಮ್ಮೆ ಜೀವಕ್ಕೆ ಅಪಾಯವಾಗಬಹುದು. ಈ ಕಾಯಿಲೆಯ ಕುರಿತು ತಿಳಿವಳಿಕೆ ಅಗತ್ಯವಾಗಿದ್ದು, ಜನಸಾಮಾನ್ಯರಿಗೆ ಅರಿವು ಮೂಡಿಸುವಲ್ಲಿ ವಿದ್ಯಾರ್ಥಿಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಹಿರಿಯ ಶಿಕ್ಷಕಿ ಇಂದಿರಾ ಅನಿಸಿಕೆ ವ್ಯಕ್ತಪಡಿಸಿದರು.

Apasmaara-2
ಉಡುಪಿಯ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಲ್ಲಾಸ್ಪತ್ರೆಯ ಬ್ರೈನ್​ ಹೆಲ್ತ್​ ಕ್ಲಿನಿಕ್​ ಮತ್ತು ಪ್ರೌಢಶಾಲಾ ವಿಭಾಗದ ಇಕೋ ಕ್ಲಬ್​ ಆಶ್ರಯದಲ್ಲಿ ಶಾಲೆಯ ಸವ್ಯಸಾಚಿ ಸಭಾಭವನದಲ್ಲಿ ಫೆ.15ರಂದು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮೂರ್ಛೆ ರೋಗ ದಿನಾಚರಣೆಯಲ್ಲಿ ಮಾತನಾಡಿದರು.

ಜಿಲ್ಲಾಸ್ಪತ್ರೆಯ ಸೈಕಾಲಜಿಸ್ಟ್​ ಅಬ್ದುಲ್​ ಸಮದ್​ ಮೂರ್ಛೆ ರೋಗದ ಕುರಿತು ಸಮಗ್ರ ಮಾಹಿತಿ ನೀಡಿದರು. ಶಾಲೆಯ ಇಕೋ ಕ್ಲಬ್​ ಸಂಚಾಲಕಿ ಜ್ಯೋತಿ ಮಾತನಾಡಿ, ಮೂರ್ಛೆ ರೋಗದ ಕುರಿತಾಗಿ ಇರುವ ಮೂಢನಂಬಿಕೆ ತೊಲಗಬೇಕಿದೆ ಎಂದರು.

ಶಾಲೆಯ ಎನ್​ಎಸ್​ಎಸ್​ ಸಂಚಾಲಕಿ ಮಂಜುಳಾ, ಬ್ರೈನ್​ ಹೆಲ್ತ್​ ಕ್ಲಿನಿಕ್​ನ ಶುಶ್ರೂಷಕ ರಾಮಕುಮಾರ್​ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net