ಬಾಲಕಾರ್ವಿುಕ ವಿರೋಧಿ ದಿನಾಚರಣೆ

GJD MAKKALU
Published on

ಗಜೇಂದ್ರಗಡ: ಕಲಿಯುವ ವಯಸ್ಸಿನಲ್ಲಿ ಮಕ್ಕಳ ದುಡಿಮೆ ಆತಂಕಕಾರಿ ಬೆಳವಣಿಗೆಯಾಗಿದೆ. ಬಾಲಕಾರ್ವಿುಕ ಪದ್ಧತಿ ನಿಯಂತ್ರಣಕ್ಕೆ ಕಠಿಣ ಕಾನೂನು ಕ್ರಮ ಹಾಗೂ ಜನಜಾಗೃತಿ ಇನ್ನಷ್ಟು ಅವಶ್ಯಕವಾಗಿದೆ ಎಂದು ಪ್ರಾಚಾರ್ಯ ವಸಂತರಾವ್ ಗಾರಗಿ ಹೇಳಿದರು.

ಪಟ್ಟಣದ ಶ್ರೀ ಅನ್ನದಾನೇಶ್ವರ ಪಿಯು ಕಾಲೇಜ್​ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಲಕಾರ್ವಿುಕ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಶಿಕ್ಷಣ, ಆಟ, ವಿರಾಮ, ಆಹಾರ ಎಲ್ಲಾ ರೀತಿಯ ಹಕ್ಕಗಳನ್ನು ಪಡೆಯಬೇಕು ಇಲ್ಲವಾದರೆ ಅವರ ಬೆಳವಣಿಗೆ ಕುಂಠಿತವಾಗುತ್ತದೆ. ಬಡತನ ನೆಪಮಾಡಿಕೊಂಡು ಬಾಲಕಾರ್ವಿುಲರಾಗುವ ಮಕ್ಕಳು ತಮ್ಮ ಎಲ್ಲಾ ಮಕ್ಕಳ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಅದನ್ನು ತಡೆಗಟ್ಟಲು ಮತ್ತು ಜಾಗೃತಿ ಮೂಡಿಸಲು ವಿಶ್ವ ಸಂಸ್ಥೆಯು ಪ್ರತಿ ವರ್ಷ ಜೂನ್ 12ನ್ನು ವಿಶ್ವ ಬಾಲಕಾರ್ವಿುಕ ವಿರೋಧಿ ದಿನವೆಂದು ಆಚರಿಸಲಾಗುತ್ತದೆ ಎಂದು ಹೇಳಿದರು.

ಮಕ್ಕಳಿಗೆ ಶಿಕ್ಷಕ ಬಾಲಚಂದ್ರ ವಾಲ್ಮೀಕಿ ವಿಶ್ವ ಬಾಲಕಾರ್ವಿುಕ ವಿರೋಧಿ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸಂಗಮೇಶ ವಸ್ತ್ರದ, ಪ್ರತಿಭಾ ಲಕ್ಷಕೊಪ್ಪದ, ಪ್ರೀತಿ ಹೊಂಬಳ, ವಿಜಯಲಕ್ಷ್ಮೀ ಅರಳಿಕಟ್ಟಿ, ಮಂಜುನಾಥ ಕುಂಬಾರ, ಮನೋಜ ಕಲಾಲ, ಬಿ.ಎಸ್.ಹಿರೇಮಠ, ಬಾಲಚಂದ್ರ ಎಸ್., ಸಂಗೀತಾ ನಾಲತವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net