ಆಹಾರ ಸುಸ್ಥಿರತೆಗೆ ನ್ಯಾನೋ ಸಂಶೋಧನೆ

0801KLB01
Published on

ಕಲಬುರಗಿ: ಬೆಳೆ, ತಳಿ ಸಂವರ್ದನೆ ಸೇರಿ ಕೃಷಿ ಕ್ಷೇತ್ರದಲ್ಲಿ ಜೈವಿಕ ನ್ಯಾನೋ ತಂತ್ರಜ್ಞಾನದ ಸಂಶೋಧನೆಗಳು ಭವಿಷ್ಯದಲ್ಲಿ ಆಹಾರ ಸುಸ್ಥಿರತೆಗೆ ಪೂರಕವಾಗಿ ಇರಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದು ಅವಶ್ಯವಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ್ ಹೇಳಿದರು.

ಗುಲ್ಬರ್ಗ ವಿವಿ, ಯುಕೆಯ ಬ್ರಾಡ್‌ಫೋರ್ಡ್ ವಿವಿ ಸಹಯೋಗದಲ್ಲಿ ಜ್ಞಾನಗಂಗಾ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಮಾನವ ಯೋಗಕ್ಷೇಮದಲ್ಲಿ ಜೈವಿಕ ನ್ಯಾನೋ ತಂತ್ರಜ್ಞಾನದ ಇತ್ತೀಚಿನ ಬೆಳವಣಿಗೆಗಳು' ಕುರಿತ ಎರಡು ದಿನದ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರಸ್ತುತ ನ್ಯಾನೋ ತಂತ್ರಜ್ಞಾನವೂ ಕೃಷಿ ಜತೆಗೆ ಕೈಗಾರಿಕೆ, ಔಷಧ ಸೇರಿ ಸೂಕ್ಷö್ಮತೆಯುಳ್ಳ ಕ್ಷೇತ್ರಕ್ಕೆ ತನ್ನ ವಿಸ್ತಾರವನ್ನು ಹರಡಿಕೊಂಡಿದೆ ಎಂದು ಹೇಳಿದರು. ನ್ಯಾನೋ ತಂತ್ರಜ್ಞಾನವೂ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆಯುತ್ತಿದೆ. ವ್ಯವಸಾಯದಲ್ಲಿನ ಹೊಸ ಪ್ರಯೋಗಗಳಲ್ಲಿ ನ್ಯಾನೋ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಿದ್ದು, ರಸಗೊಬ್ಬರ, ಕೀಟನಾಶಕ, ಸಸ್ಯನಾಶಕ, ಶಿಲೀಂದ್ರಗಳು ನ್ಯಾನೋ ರೂಪದಲ್ಲಿ ದೊರೆಯುತ್ತಿವೆ. ಇದನ್ನು ಬೆಳೆಯ ಆರೋಗ್ಯ ರಕ್ಷಣೆ, ಮಣ್ಣಿನ ಸತ್ವ ಪೋಷಣೆಯ ನಿಟ್ಟಿನಲ್ಲಿ ಸಂಶೋಧಿಸಬೇಕು ಎಂದು ಸಲಹೆ ನೀಡಿದರು.

ಹರ್ಯಾಣದ ಅಮೇಟಿ ವಿಶ್ವವಿದ್ಯಾಲಯದ ಡೀನ್ ಪ್ರೊ.ರಾಜೇಂದ್ರ ಪ್ರಸಾದ ಮಾತನಾಡಿ, ಶಿಲೀಂಧ್ರಗಳು ಮಾನವನಲ್ಲಿ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತಿವೆ. ಬ್ಯಾಕ್ಟೇರಿಯಾ, ವೈರಸ್ ಸೇರಿ ಯಾವುದೇ ರೂಪದಲ್ಲಿ ಶಿಲೀಂಧ್ರಗಳು ದೇಹವನ್ನು ಪ್ರವೇಶಿಸಿ, ದೇಹ, ಚರ್ಮಕ್ಕೆ ಅಪಾಯವನ್ನು ತಂದೊಡ್ಡುತ್ತವೆ. ಕೋವಿಡ್ ಸಂದರ್ಭದಲ್ಲಿ ಶಿಲೀಂಧ್ರ (ಫಂಗಸ್) ಚರ್ಚೆಗೆ ಬಂದಿತ್ತು. ಭವಿಷ್ಯದಲ್ಲಿ ಶಿಲೀಂಧ್ರಗಳಿAದ ಮತ್ತೊಂದು ಸಾಂಕ್ರಾಮಿಕ ರೋಗ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ ಎಂದು ಹೇಳಿದರು.

ಗುಲ್ಬರ್ಗ ವಿವಿ ಕುಲಪತಿ ಪ್ರೊ.ದಯಾನಂದ ಅಗಸರ ಮಾತನಾಡಿ, ವಿಶ್ವವಿದ್ಯಾಲಯದ ಶೈಕ್ಷಣಿಕ ಇತಿಹಾಸದಲ್ಲಿ ಮಹತ್ವದ ಕಾರ್ಯಕ್ರಮ ನಡೆಯುತ್ತಿದ್ದು, ಒಂಬತ್ತು ರಾಜ್ಯದ, ಒಂಬತ್ತು ರಾಷ್ಟçದ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ೨೪ ತಜ್ಞರು ಉಪನ್ಯಾಸ ನೀಡುತ್ತಿದ್ದು, ವಿಶ್ವವಿದ್ಯಾಲಯದಲ್ಲಿಹೈ ಫ್ರೊಫೈಲ್ ಅಕಾಡೆಮಿಕ್ ಟಾಸ್ಕ್ ಫೋರ್ಸ್' ಸ್ಥಾಪಿಸುವ ಯೋಜನೆ ಇದೆ ಎಂದು ತಿಳಿಸಿದರು.

ಬ್ರಾಡ್‌ಫೋರ್ಡ್ ವಿಶ್ವವಿದ್ಯಾಲಯದ ಡಾ.ಎಸ್.ಎ.ಖಘಾನಿ ಮಾತನಾಡಿ, ಜೈವಿಕ ಕ್ಷೇತ್ರದಲ್ಲಿ ನ್ಯಾನೋ ತಂತ್ರಜ್ಞಾನವೂ ಅವಶ್ಯವಾಗಿದೆ. ಉನ್ನತ ಸಂಶೋಧನೆಗಳು ನಡೆಯಬೇಕಿದೆ. ಆ ನಿಟ್ಟಿನಲ್ಲಿ ಈ ಸಮ್ಮೇಳನ ವೇದಿಕೆ ಎಂದು ಹೇಳಿದರು.

ಬಡ್ರಾಫೋರ್ಡ್ ವಿವಿ ಕುಲಪೊತಿ ಶಿರ್ಲೆ ಕಾಂಡೋನ್ ಆನ್‌ಲೈನ್ ಮೂಲಕ ಭಾಗವಹಿಸಿದ್ದರು. ಪ್ರೊ.ಜಿ.ಎಂ.ವಿದ್ಯಾಸಾಗರ, ಸಿಂಡಿಕೇಟ್ ಸದಸ್ಯ ರಾಘವೇಂದ್ರ ಬೈರಪ್ಪ, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಟಿ.ಶಂಕರಪ್ಪ, ರಾಜ್ನಾಳ್ಕರ್ ಲಕ್ಷö್ಮಣ ಇತರರಿದ್ದರು. ಕುಲಸಚಿವ ಬಿ.ಶರಣಪ್ಪ ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವ ಧಮ್ಮಜ್ಯೋತಿ ಪ್ರಕಾಶ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net