ಐಇಎಂಎಸ್ ನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ, ನಾಳೆಯಿಂದ ಹುಬ್ಬಳ್ಳಿಯಲ್ಲಿ ಎರಡು ದಿನ ಆಯೋಜನೆ

IMG_20240116_111810_14.jpg
Published on

ಹುಬ್ಬಳ್ಳಿ: ಇಲ್ಲಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ ಕೈಜನ್ ಎಜ್ಯುಪ್ಲಸ್ ಸೊಸೈಟಿಯ ಇನ್ ಸ್ಟಿಟ್ಯೂಟ್ ಆಫ್ ಎಕ್ಸಲ್ಲನ್ಸ್ ಇನ್ ಮ್ಯಾನೇಜ್ಮೆಂಟ್ ಸೈನ್ಸ್ ನಲ್ಲಿ (ಐಇಎಂಎಸ್ ಬಿಸ್ಕೂಲ್) ಉದ್ಯಮಶೀಲತೆ ಮತ್ತು ನಾವಿನ್ಯತೆ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನವನ್ನು ಜ. 18ರಿಂದ ಎರಡು ದಿನಗಳವರೆಗೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಗೌರವ ಅಧ್ಯಕ್ಷ ಡಾ. ಎನ್.ಎ. ಚರಂತಿಮಠ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯಿಂದ ಇದೇ ಮೊದಲ ಬಾರಿ ಅತಿ ದೊಡ್ಡ ಮಟ್ಟದಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಏರ್ಪಡಿಸಲಾಗುತ್ತಿದೆ. ಇದರಲ್ಲಿ ಯುಕೆ, ಯುಎಸ್ಎ, ಸ್ಪೇನ್, ಆಸ್ಟ್ರೆಲಿಯಾ ಸೇರಿ 15 ದೇಶಗಳ ಸುಮಾರು 150 ಪ್ರತಿನಿಧಿಗಳು ಪಾಲ್ಗೊಳ್ಳುವರು. ಉನ್ನತ ಶಿಕ್ಷಣದಲ್ಲಿ ಮಾದರಿಯಾಗುವ ಇಕೋ ಸಿಸ್ಟ್ಂ ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಈ ಸಮ್ಮೇಳನಕ್ಕೆ ಹೈದ್ರಾಬಾದ್ ನ ಏಮ್ಸ್, ಬಾಂಗ್ಲಾದೇಶ ಡಾಕಾದ ಇಂಟರ್ನ್ಯಾಷನಲ್ ಯುನಿವಸಿರ್ಟಿ, ಬೆಂಗಳೂರಿನ ಮ್ಯಾನೇಜಮೆಂಟ್ ಟೀಚರ್ಸ್ ಕನ್ಸೋಟಿರ್ಯಂ- ಗ್ಲೋಬಲ್ ಹಾಗೂ ದೇಶಪಾಂಡೆ ಸ್ಟಾರ್ಟ್ಅಪ್ಸ್ ಇವುಗಳು ಸಹಯೋಗ ನೀಡಿವೆ.
ಎಂಟು ತಾಂತ್ರಿಕ, ನಾಲ್ಕು ಪ್ಲೇನರಿ ವಿಚಾರಗೋಷ್ಠಿಗಳು ನಡೆಯಲಿವೆ. 50 ಸಂಶೋಧನಾ ಪ್ರಬಂಧ ಮಂಡನೆಯಾಗಲಿವೆ. ಅತ್ಯುತ್ತಮ ಮೂರು ಸಂಶೋಧನಾ ಪ್ರಬಂಧ ಪ್ರಸ್ತುತಿಗಳನ್ನು ತೀರ್ಪುಗಾರರ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದು ಸಮ್ಮೇಳನ ಮಾರ್ಗದರ್ಶಕರಾದ ಡಾ. ರ್ಪೂಣಿಮಾ ಚರಂತಿಮಠ ತಿಳಿಸಿದರು.

ಐಇಎಂಎಸ್ ನಿರ್ದೇಶಕ ಡಾ. ವೀರಣ್ಣ ಡಿ.ಕೆ. ಮಾತನಾಡಿ, ಸ್ಥಳಿಯ ಕಾಲೇಜುಗಳ ವಿದ್ಯಾಥಿರ್ಗಳು ಇದರಲ್ಲಿ ಪಾಲ್ಗೊಳ್ಳುವರು. ಸಮ್ಮೇಳನದಿಂದ ಜಾಗತಿಕ ಮಟ್ಟದಲ್ಲಿ ನೆಟ್ವರ್ಕ್ ಬೆಳೆಯಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net