

ಮಂಡ್ಯ: ಕಾಫಿ ಉತ್ಪಾದನೆಯಲ್ಲಿ ವಿಶ್ವದಲ್ಲಿ ಭಾರತ 7ನೇ ಸ್ಥಾನದಲ್ಲಿದೆ. ರಫ್ತಿನಲ್ಲಿ 5ನೇ ಸ್ಥಾನದಲ್ಲಿದೆ. ದೇಶದ ರಪ್ತು ಪ್ರಮಾಣದಲ್ಲಿ ಕರ್ನಾಟಕದ ಕೊಡುಗೆ ಶೇ.70ರಷ್ಟಿದೆ ಎಂದು ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್‌ನ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.
ನಗರದ ವಿ.ವಿ ರಸ್ತೆಯಲ್ಲಿರುವ ಟೀಮ್ಯಾಕ್ಸ್ ಕೆಫೆ ಅಂಗಡಿಯಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಮತ್ತು ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಕರ್ನಾಟಕ ಕಾಫಿ ರಾಜಧಾನಿ ಎನ್ನುವ ಖ್ಯಾತಿ ಪಡೆದಿದೆ. ಮಾತ್ರವಲ್ಲದೆ 100 ಮಿಲಿಯನ್ ಕುಟುಂಬಕ್ಕೆ ಉದ್ಯೋಗ ಮತ್ತು ಜೀವನೋಪಾಯವನ್ನು ಒದಗಿಸುವ 200 ಶತಕೋಟಿ ರೂ ಮೌಲ್ಯದ ವಿಶ್ವದ ಅತಿದೊಡ್ಡ ವ್ಯಾಪಾರದ ಸರಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕಾಫಿ ಉದ್ಯಮವಾಗಿ ಬೆಳೆದು ಸಾಕಷ್ಟು ಸ್ವ ಉದ್ಯೋಗಗಳನ್ನು ನೀಡಿದೆ. ಗುಣಮಟ್ಟದ ಕಾಫಿ ಕುಡಿಯಲು ದೂರದೂರಿಗೂ ಹೋಗುವುದು ಉಂಟು. ಕಾಫಿ ಪ್ರಿಯಯರಿಂದ ರೈತರ ಬದುಕು ಪರೋಕ್ಷವಾಗಿ ಚೇತರಿಕೆ ಕಾಣುತ್ತದೆ. ಹೈನುಗಾರಿಕೆ, ಕಬ್ಬು ಬೆಳೆಗಾರರು, ಕಾರ್ಮಿಕರಿಗೆ ನೆರವಾಗುತ್ತಿದೆ. ಪ್ರತಿದಿನ ಎರಡು ಕಪ್ ಕಾಫಿ ಕುಡಿಯುವುದರಿಂದ ದೈಹಿಕ ಆರೋಗ್ಯ ಆಹ್ಲಾದಕರವಾಗಿರುತ್ತದೆ. ಹಿತ-ಮಿತವಾಗಿ ಕಾಫಿ ಸೇವನೆಯಿಂದ ಒಂದಷ್ಟು ರೋಗಗಳಿಂದ ದೂರವಿರಬಹುದು. ಕ್ಯಾನ್ಸರ್‌ನಂತ ಕಾಯಿಲೆಯನ್ನು ತಡೆಗಟ್ಟು ಶಕ್ತಿ ಇದೆ ಎಂದರು.
ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್ ಮಾತನಾಡಿದರು. ನಗರಸಭೆ ಉಪಾಧ್ಯಕ್ಷ ಅರುಣ್‌ಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವಲಿಂಗೇಗೌಡ, ಕೃಷಿಕ ಮತ್ತು ಕಾಂಟ್ರಾ್ಯೃಕ್ಟರ್ ಅಲಯನ್ಸ್ ಸಂಸ್ಥೆಯ ಮಂಜುನಾಥ್, ಡಾ.ಉಮೇಶ್, ಚಂದ್ರಶೇಖರ್, ನಿವೃತ್ತ ಸೈನಿಕ ಚಂದ್ರಶೇಖರ್, ಸೋಮಶೇಖರ್ ಮತ್ತಿತರರಿದ್ದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಕಾಫಿ ವಿತರಣೆ ಮಾಡಲಾಯಿತು.