International Coffee Day : ಬೆಕ್ಕಿನ ಮಲದಿಂದ ತಯಾರಿಸುವ ಬಿಸಿ ಬಿಸಿ 'ಕಾಫಿ' ಗೆ ಭಾರಿ ಡಿಮ್ಯಾಂಡ್​​....

civetcatpotty
Published on

ಬೆಂಗಳೂರು: (International Coffee Day )  ಕಾಫಿಯ  ( Coffee ) ಕ್ರೇಜ್  ಎಷ್ಟರ ಮಟ್ಟಿಗೆ ಇದೆ ಎಂದರೆ ಜನರು ಹೊಸ ಹೊಸ ರುಚಿಗಳನ್ನು ಪ್ರಯತ್ನಿಸುತ್ತಾರೆ. ದುಬಾರಿ ಕಾಫಿಗಳಲ್ಲಿ ಒಂದನ್ನು ಸವಿಯಲು ಬಯಸುವಿರಾ? ಆದರೆ ವಿಶ್ವದ ಅತ್ಯಂತ ದುಬಾರಿ ಕಾಫಿಯನ್ನು ಬೆಕ್ಕಿನ ಹಿಕ್ಕೆಯಿಂದ ತಯಾರಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಜನರು ಈ ಕಾಫಿಯನ್ನು ತುಂಬಾ ಪ್ರೀತಿಯಿಂದ ಏಕೆ ಕುಡಿಯುತ್ತಾರೆ  ಎನ್ನುವ ಕುರಿತಾಗಿ ನಾವು ಇಂದು ನಿಮಗೆ ತಿಳಿಸಿ ಕೊಡಲಿದ್ದೇವೆ...

ಅಂತರಾಷ್ಟ್ರೀಯ ಕಾಫಿ ಸಂಸ್ಥೆಯ 77 ಸದಸ್ಯ ರಾಷ್ಟ್ರಗಳು ಮತ್ತು ಪ್ರಪಂಚದಾದ್ಯಂತದ ಕಾಫಿ ಸಂಘಗಳು ಅ. 1ರಂದು ಕಾಫಿ ದಿನವನ್ನು ಆಚರಿಸುತ್ತವೆ. 2014 ರಲ್ಲಿ, ಕಾಫಿ ವಲಯದ ವೈವಿಧ್ಯತೆ, ಗುಣಮಟ್ಟ ಮತ್ತು ಕಾಫಿ ಬೆಳೆಯುವವರ ಉತ್ಸಾಹವನ್ನು ಇಮ್ಮಡಿಗೊಳಿಸಲು ಮತ್ತು ಎಲ್ಲಾ ಕಾಫಿ ಪ್ರಿಯರಿಗೆ ಈ ದಿನವನ್ನು ಮೀಸಲಿಡಲು ಅಂತರಾಷ್ಟ್ರೀಯ ಕಾಫಿ ಸಂಸ್ಥೆ (ಐಸಿಒ) ನಿರ್ಧರಿಸಿದ್ದು, ಹಾಗಾಗಿ ನಾವು ಪ್ರತಿವರ್ಷ ಅ. 1ರಂದು ಅಂತರಾಷ್ಟ್ರೀಯ ಕಾಫಿ ದಿನವನ್ನು  ( International Coffee Day ) ಆಚರಿಸುತ್ತೇವೆ.

ಬೆಕ್ಕಿನ ಮಲದಿಂದ ವಿಶ್ವದ ಅತ್ಯಂತ ದುಬಾರಿ ಕಾಫಿ : 

ಲುವಾರ್ಕ್ ಕಾಫಿ ಎಂದೂ ಕರೆಯಲ್ಪಡುವ ಸಿವೆಟ್ ಕಾಫಿ ದುಬಾರಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ಬೆಕ್ಕಿನ ಮಲದಿಂದ ವಿಶ್ವದ ಅತ್ಯಂತ ದುಬಾರಿ ಕಾಫಿಪುಡಿ ಉತ್ಪಾದನೆಗೆ ಚಾಲನೆ ನೀಡಿದೆ. ಸಿವೆಟ್ ಕಾಫಿ ವಿಶ್ವದ ದುಬಾರಿ ಕಾಫಿ ಎಂದೇ ಪ್ರಸಿದ್ಧಿ ಪಡೆದಿದ್ದು, ಇದಕ್ಕೆ ಕನ್ನಡದಲ್ಲಿ ಪುನುಗು ಬೆಕ್ಕಿನ ಕಾಫಿ ಪುಡಿ ಎಂದು ಕರೆಯಲಾಗುತ್ತದೆ.   ಈ ಕಾಫಿ ಪುಡಿಯ  ಒಂದು ಕೆಜಿ ಬೆಲೆ 20 ಸಾವಿರದಿಂದ 25 ಸಾವಿರ ರುಪಾಯಿ.

ಈ ಕಾಫಿಪುಡಿ ತಯಾರಾಗುವುದು ಬೆಕ್ಕಿನ ಮಲದಿಂದ. ಆದರೆ ಪುನುಗು ಬೆಕ್ಕಿನ ದೇಹದಿಂದ ಹೊರಬೀಳುವ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯ ಅತ್ಯಂತ ತ್ರಾಸದಾಯಕವಾಗಿರುವ ಕಾರಣ ಈಗ ಸಣ್ಣ ಮಟ್ಟದಲ್ಲಿ ಸಿವೆಟ್ ಕಾಫಿ ತಯಾರಿಸುವ ಉಪ ಕ್ರಮವನ್ನು ಕೊಡಗಿನಲ್ಲಿರುವ ಕೂರ್ಗ್ ಕನ್ಸಾಲಿಡೇಟೆಡ್ ಕಮಾಡಿಟೀಸ್(ಸಿಸಿಸಿ) ಆರಂಭಿಸಿದೆ.

ಈ ಬೀಜಗಳನ್ನು ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಪಡೆಯಲು ಸಾಧ್ಯವಿಲ್ಲ. ಏಕೆಂದರೆ ಕಾಫಿಹಣ್ಣುಗಳು ಚೆನ್ನಾಗಿ ಕಳಿತ ಬಳಿಕ ಸಿವೆಟ್ ಎಂಬ ಬೆಕ್ಕು ಇದನ್ನು ತಿನ್ನಬೇಕು. ಸಿವೆಟ್ ಕ್ಯಾಟ್ ಎಂದು ಕರೆಯಲ್ಪಡುವ ಒಂದು ಜಾತಿಯ ಬೆಕ್ಕು ಇದೆ. ಈ ಸಿವೆಟ್ ಬೆಕ್ಕು ಅತ್ಯುತ್ತಮ ಕಾಫಿ ಬೀಜಗಳನ್ನು ತಿನ್ನಲು ಇಷ್ಟಪಡುತ್ತದೆ. ಈ ಬೆಕ್ಕಕಿನ ಕರುಳುಗಳಲ್ಲಿ ಈ ಹಣ್ಣುಗಳು ಜೀರ್ಣಗೊಂಡು ಒಳಗಿನ ಗಟ್ಟಿಬೀಜಗಳು ಮಾತ್ರ ಜೀರ್ಣಗೊಳ್ಳದೇ ಉಚ್ಛಿಷ್ಠದಲ್ಲಿ ಹೊರಬರಬೇಕು. ಇದನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿ ಬೀಜಗಳನ್ನು ಪ್ರತ್ಯೇಕಿಸಬೇಕು. ಅಂದರೆ ಈ ಪ್ರಮಾಣ ಒಂದು ಬೆಕ್ಕು ಪ್ರತಿದಿನ ವಿಸರ್ಜಿಸುವ ಪ್ರಮಾಣ ಹಾಗೂ ಬೆಕ್ಕುಗಳ ಸಂಖ್ಯೆಗಳ ಮೇಲೆ ಅವಲಂಬಿತವಾಗಿರುವುದರಿಂದ ಈ ಬೀಜಗಳು ಕಡಿಮೆ ಪ್ರಮಾಣದಲ್ಲಿ ದೊರಕುತ್ತವೆ.

ಈ ರೀತಿ ಬೆಕ್ಕಿನ ಮಲದಿಂದ ಕಾಫಿ ತಯಾರಿಸುತ್ತಾರೆ

ಬೆಕ್ಕಿನ ಮಲವನ್ನು ಸೂಕ್ಷ್ಮಾಣು ಮುಕ್ತಗೊಳಿಸಲು ಹಲವಾರು ಬಾರಿ ಸಂಸ್ಕರಿಸಲಾಗುತ್ತದೆ.  ಶುದ್ಧೀಕರಿಸುವ ಮೂಲಕ   ಹುರಿಯಲಾಗುತ್ತದೆ. ಆಗ ಪ್ರಪಂಚದ ಅತ್ಯಂತ ದುಬಾರಿ ಕಾಫಿ ತಯಾರಾಗುತ್ತದೆ.

ಬೆಕ್ಕಿನ ಮಲದಿಂದ ಈ ಕಾಫಿಯನ್ನು ತೆಗೆದುಕೊಳ್ಳುವ ಅಗತ್ಯವೇನಿದೆ ಎಂಬ ಪ್ರಶ್ನೆ ಈಗ ನಿಮ್ಮ ಮನಸ್ಸಿನಲ್ಲಿ ಬರಬಹುದು. ಆದರೆ ಈ ಕಾಫಿ ಬೀಜಗಳು ಬೆಕ್ಕಿನ ದೇಹದ ಕರುಳಿನ ಮೂಲಕ ಹಾದುಹೋದಾಗ, ಅದರಲ್ಲಿ ಅನೇಕ ರೀತಿಯ ಜೀರ್ಣಕಾರಿ ಕಿಣ್ವಗಳು ಸೇರಿಕೊಳ್ಳುತ್ತವೆ, ಇದರಿಂದಾಗಿ ಅದರ ಪೌಷ್ಟಿಕಾಂಶದ ಮೌಲ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಅಮೆರಿಕದಿಂದ ಗಲ್ಫ್ ರಾಷ್ಟ್ರಗಳು ಮತ್ತು ಯುರೋಪ್ ವರೆಗೆ ಜನರು ಈ ಕಾಫಿಯನ್ನು ಬಹಳ ಪ್ರೀತಿಯಿಂದ ಕುಡಿಯುತ್ತಾರೆ. ಈ ಕಾಫಿಯನ್ನು ಪ್ರಪಂಚದಾದ್ಯಂತ ಅತ್ಯಂತ ಶ್ರೀಮಂತರು ಕುಡಿಯುತ್ತಾರೆ. ಈ ಕಾಫಿಯ ಒಂದು ಕಪ್ ಅಮೆರಿಕದಲ್ಲಿ ಸುಮಾರು 6 ಸಾವಿರ ರೂ.ಗೆ ಮಾರಾಟವಾಗುತ್ತದೆ. 1 ಕೆಜಿ ಕಾಫಿ ಬೆಲೆ 25-30 ಸಾವಿರ ರೂ. 

ಬೆಕ್ಕಿನ ಮಲದಿಂದ ಭಾರತದಲ್ಲೂ ಕಾಫಿ ಉತ್ಪಾದನೆ: 

ಸಿವೆಟ್ ಕಾಫಿಯನ್ನು ಭಾರತದಲ್ಲಿ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಉತ್ಪಾದಿಸಲಾಗುತ್ತದೆ. ಇದಲ್ಲದೆ, ಏಷ್ಯಾದ ದೇಶಗಳಲ್ಲಿ ಇಂಡೋನೇಷ್ಯಾದಲ್ಲಿ ಸಿವೆಟ್ ಕಾಫಿಯನ್ನು ಸಹ ಉತ್ಪಾದಿಸಲಾಗುತ್ತದೆ. ಈಗ ಸಿವೆಟ್ ಬೆಕ್ಕುಗಳನ್ನು ಕಾಫಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೆರೆಹಿಡಿಯಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net