26ರಿಂದ ಅಂತಾರಾಷ್ಟ್ರೀಯ ಸಿನಿಮೋತ್ಸವ

move feb 07 2020
Published on

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ಫೆ. 26ರಿಂದ ಮಾ.4ರವರೆಗೆ ನಗರದಲ್ಲಿ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ (ಬಿಫಿಸ್) ಆಯೋಜಿಸಿದೆ. 60 ದೇಶಗಳ 200 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ ಎಂದು ಅಧ್ಯಕ್ಷ ಸುನೀಲ್ ಪುರಾಣಿಕ್ ತಿಳಿಸಿದ್ದಾರೆ.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.26ರಂದು ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಉತ್ಸವಕ್ಕೆ ಚಾಲನೆ ನೀಡುವರು. 27ಕ್ಕೆ ಸಿನಿಮಾಗಳ ಪ್ರದರ್ಶನ ಆರಂಭವಾಗಲಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಮಾ. 4ರಂದು ನಡೆಯಲಿರುವ ಸಮಾರೋಪದಲ್ಲಿ ರಾಜ್ಯಪಾಲ ವಿ.ಆರ್. ವಾಲಾ ಕನ್ನಡ ಸೇರಿ ವಿವಿಧ ಭಾಷೆಗಳ ಸಿನಿಮಾಗಳ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಶಸ್ತಿ ವಿಜೇತ ಉಪಭಾಷಾ ಚಿತ್ರಗಳ ಪ್ರದರ್ಶನ: ಉಪಭಾಷೆಗಳಾದ ತುಳು, ಬಂಜಾರ ಕೊಡವ, ಕೊಂಕಣಿ (ಕರ್ನಾಟಕ), ಪನಿಯ (ಕೇರಳ), ಇರುಳ (ತಮಿಳುನಾಡು), ಖಾಸಿ, ಪಂಗ್ಚನ್ಪಾ (ಅಸ್ಸಾಂ) ಸಿನಿಮಾಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟದ ಪ್ರಶಸ್ತಿ ಹಾಗೂ ಚಲನಚಿತ್ರ ಪ್ರಚಾರ ಜಾಲ ಪ್ರಶಸ್ತಿ ವಿಜೇತ ಆಯ್ದ ಸಿನಿಮಾಗಳು ಪ್ರದರ್ಶನ ಗೊಳ್ಳಲಿವೆ ಎಂದು ಸುನೀಲ್ ಪುರಾಣಿಕ್ ತಿಳಿಸಿದರು.

ಚಲನಚಿತ್ರಗಳ ಸ್ಪರ್ಧೆ: ಸಿನಿ ಮೋತ್ಸವದಲ್ಲಿ ಆಯ್ಕೆ ಆಗಿರುವ ಸಿನಿಮಾಗಳಲ್ಲಿ ಏಷ್ಯಾ ಸಿನಿಮಾಗಳು, ಭಾರತೀಯ ಸಿನಿಮಾಗಳು, ಕನ್ನಡ ಸಿನಿಮಾಗಳು ಹಾಗೂ ಕನ್ನಡದ ಜನಪ್ರಿಯ ಮನೋರಂಜನಾ ಸಿನಿಮಾಗಳು ಎಂದು 4 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿವೆ. ಸ್ಪರ್ಧೆಯಲ್ಲಿನ ಸಿನಿಮಾಗಳ ವಿವರ ಉತ್ಸವದ ಜಾಲತಾಣ www.biffes.in ದಲ್ಲಿ ಲಭ್ಯವಿದೆ ಎಂದರು. ಡಿಐಪಿಆರ್ ಆಯುಕ್ತ ಸಿದ್ದರಾಮಪ್ಪ, ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಹಿಮಂತರಾಜು ಇದ್ದರು.

ಅನಂತ್ ಸಿನಿಮಾಗಳ ಪುನರಾವಲೋಕನ

ಸಿನಿಮೋತ್ಸವದಲ್ಲಿ ಭಾರತದ ಬಹುಭಾಷಾ ಕಲಾವಿದರ ವಿಭಾಗದಲ್ಲಿ ಕನ್ನಡದ ಹಿರಿಯ ನಟ ಅನಂತ್​ನಾಗ್ ಹಾಗೂ ರಷ್ಯಾದ ನಿರ್ದೇಶಕ ಹಾಗೂ ಸಿನಿತಜ್ಞ ಆಂದ್ರೆ ತಾಕೋವ್​ಸ್ಕಿ ಅವರ ಚಿತ್ರಗಳ ಪುನರಾವಲೋಕನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಮಕಾಲೀನ ಸಿನಿಮಾಗಳ ಜತೆಗೆ ದೇಶಿ ಕೇಂದ್ರಿತ ವಿಭಾಗದಲ್ಲಿ ಫಿಲಿಪ್ಪೀನ್ಸ್, ಜರ್ಮನಿ ಮತ್ತು ಆಸ್ಟ್ರೇಲಿಯಾದ ಸಿನಿಮಾಗಳು ಪ್ರದರ್ಶನ ಕಾಣಲಿವೆ.

ಕಾರ್ಯಾಗಾರ, ಸಂವಾದ

ಚಿತ್ರೋತ್ಸವ ನಡೆಯುವ ಏಳು ದಿನಗಳಲ್ಲಿ ಸಿನಿಮಾ ಮಾಧ್ಯಮ ಮತ್ತು ಉದ್ಯಮ ವಿಷಯಕ್ಕೆ ಸಂಬಂಧಿಸಿದಂತೆ ತಜ್ಞರಿಂದ ಕಾರ್ಯಾಗಾರ, ಸಂವಾದ ಮತ್ತು ಉಪನ್ಯಾಸ ಇರಲಿದೆ. ವೆಬ್ ಸಿರೀಸ್ ರಚನೆ ಮತ್ತು ಸಂಚಿಕೆಗಳ ನಿರ್ವಹಣೆ, ಚಿತ್ರ ನಿರ್ವಣ, ಚಿತ್ರ ನಿರ್ವಪಕರಿಗೆ ಕಾನೂನು ನೆರವು, ಪೈರಸಿ ತಡೆ ಮತ್ತು ಕೃತಿಸ್ವಾಮ್ಯ ರಕ್ಷಣೆ, ಸೆನ್ಸಾರ್ ಮತ್ತು ಪ್ರಾದೇಶಿಕ ಭಾವನೆಗಳು-ನ್ಯಾಯವಾದಿಗಳು ಮತ್ತು ಕಾನೂನು ತಜ್ಞರೊಡನೆ ಚರ್ಚೆ, ಅಂತಾರಾಷ್ಟ್ರೀಯ ಸಹ ನಿರ್ಮಾಣ ಇತ್ಯಾದಿ ಕುರಿತು ಚರ್ಚೆ ನಡೆಯಲಿದೆ ಎಂದು ಸುನೀಲ್ ಪುರಾಣಿಕ್ ಹೇಳಿದರು.

ಒರಾಯನ್ ಮಾಲ್ ಮಾತ್ರವಲ್ಲ...

ರಾಜಾಜಿನಗರದ ಒರಾಯನ್ ಮಾಲ್​ನ ಪಿವಿಆರ್ ಸಿನಿಮಾದ 11 ಬೃಹತ್ ಪರದೆಗಳು, ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿನ ರಾಜ್ ಭವನ, ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿ, ನವರಂಗ್ ಚಿತ್ರಮಂದಿರಗಳಲ್ಲಿ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಸಾರ್ವಜನಿಕರಿಗೆ 800 ರೂ.  ವಿದ್ಯಾರ್ಥಿಗಳಿಗೆ 400 ರೂ.

ಈ ಬಾರಿಯ ಸಿನಿಮೋತ್ಸವಕ್ಕೆ ಆನ್​ಲೈನ್ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹೊಣೆಯನ್ನು ಚಿಟಟkಞಢಠಜಟಡಿ.ಟಞ ನಿರ್ವಹಿಸಲಿದೆ. ಸಾರ್ವಜನಿಕರಿಗೆ 800 ರೂ. ಹಾಗೂ ಚಿತ್ರೋದ್ಯಮದ ಸದಸ್ಯರು, ವಿದ್ಯಾರ್ಥಿಗಳು, ಕಲಾವಿದರು, ಹಿರಿಯ ನಾಗರಿಕರಿಗೆ 400 ರೂ. ದರ ನಿಗದಿಪಡಿಸಲಾಗಿದೆ.

ಸಿನಿಮೋತ್ಸವದಲ್ಲಿಏಷ್ಯನ್, ಭಾರತೀಯ ಮತ್ತು ಕನ್ನಡದ ಜನಪ್ರಿಯ ಸಿನಿಮಾಗಳ ಸ್ಪರ್ಧೆಗೆ 100 ಚಿತ್ರಗಳಿಗೆ ಮಾತ್ರ ಅವಕಾಶವಿತ್ತು. ಆದರೆ 700ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದವು. ಕನ್ನಡ ಚಿತ್ರಗಳ ವಿಭಾಗದಲ್ಲಿ 12 ಸಿನಿಮಾ ಗಳಿಗೆ ಅವಕಾಶ ನೀಡಲಾಗಿದೆ. ಭಾರತೀಯ ವಿಭಾಗದಲ್ಲಿ 94 ಅರ್ಜಿಗಳು ಸಲ್ಲಿಕೆಯಾಗಿವೆ. | ವಿದ್ಯಾಶಂಕರ್ ಎನ್. ಜೋಯಿಸ್, ಚಿತ್ರೋತ್ಸವದ ನಿರ್ದೇಶಕ

ಪ್ರತಿನಿಧಿಗಳ ನೋಂದಣಿ ವಿವರಗಳಿಗೆ ದೂ: 022-61445050 ಅಥವಾ ಇ-ಮೇಲ್ support@book myshow.com ಸಂರ್ಪಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net