ಸರ್ಕಾರಿ ಸೌಲಭ್ಯ ಸದುಪಯೋಗಪಡೆಯಿರಿ

international child day celebration koppal apd
Published on

ಕೊಪ್ಪಳ: ಸರ್ಕಾರ ಜನ ಸಾಮಾನ್ಯರಿಗಾಗಿ ಅನೇಕ ಆರೋಗ್ಯ ಸೇವೆಗಳನ್ನು ನೀಡುತ್ತಿದ್ದು, ಅರ್ಹರು ಸದುಪಯೋಗಪಡಿಸಿಕೊಳ್ಳಿ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್​.ಹೇಳಿದರು.

ನಗರದ ಸಾಮಾರ್ಥ್ಯ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಶ್ರವಣ ನೂನ್ಯತೆಯುಳ್ಳ ವ್ಯಕ್ತಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ಕಿವುಡುತನ ತಟೆಗಟ್ಟುವ ನಿಟ್ಟಿನಲ್ಲಿ ಐದು ವರ್ಷದೊಳಗಿನ ಕಿವುಡ ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಜತೆಗೆ ಅನೇಕ ರೋಗಗಳಿಗೆ ಚಿಕಿತ್ಸೆ ಲಭ್ಯವಿದೆ. ಅರ್ಹರು ತೆರಳಿ ಪಡೆಯಬಹುದು. ಆರೋಗ್ಯ ಸೇವೆಗಳನ್ನು ಪಡೆದು ಉತ್ತಮ ಆರೋಗ್ಯ ಹೊಂದಬಹುದು ಎಂದರು.

ಬಿಇಒ ಶಂಕ್ರಯ್ಯ ಮಾತನಾಡಿ, ಶ್ರವಣ ನೂನ್ಯತೆ ಇರುವ ಮಕ್ಕಳಿಗೆ ಶಿಕ್ಷಣ ಬಹಳ ಮುಖ್ಯ. ಮಕ್ಕಳ ಸಮಸ್ಯೆ ಆದಷ್ಟು ಬೇಗ ಗುರುತಿಸಿ ಚಿಕಿತ್ಸೆ ಕೊಡಿಸಬೇಕು. ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದರು.

ಡಾ.ಮಲ್ಲಿಕಾರ್ಜುನ, ಡಾ.ಕೆ.ಜಿ.ಕುಲಕರ್ಣಿ, ಬಿ.ಹಂಪಣ್ಣ ಮಾತನಾಡಿದರು. ಪಾಲಕರಾದ ಗಾಳೆಪ್ಪ, ಅಮೀನಾ ಅಭಿಪ್ರಾಯ ಹಂಚಿಕೊಂಡರು. ಕ್ರೀಡಾಕೂಟದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಇನ್ನರ್​ವೀಲ್​ ಕ್ಲಬ್​ ಅಧ್ಯೆ ಉಮಾ ತಂಬ್ರಳ್ಳಿ, ಕಾರ್ಯದರ್ಶಿ ವೀಣಾ ಬಣ್ಣದಬಾವಿ, ಮಧು ನಿಲೋಗಲ್​, ಸುಮಂಗಲಾ ಹಂಚಿನಾಳ, ತ್ರಿಶಾಲ ಪಾಟೀಲ್​, ಡಾ.ರಾಧಾ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net