ನಾಗೇಂದ್ರ ಮುತ್ಮುರ್ಡುಗೆ ಅಂತಾರಾಷ್ಟ್ರೀಯ ಪ್ರಶಸ್ತಿ

Mussanje Matu
Published on

ಸಿದ್ದಾಪುರ: ಯುರೋಪಿನಲ್ಲಿ ಜಾರ್ಜಿಯಾ, ಸೈಪ್ರಸ್ ಮತ್ತು ಮೊರಾಕ್ಕೋ ರಾಷ್ಟ್ರಗಳು ಜಂಟಿಯಾಗಿ ಇತ್ತೀಚೆಗೆ ಆಯೋಜಿಸಿದ್ದ ಫೋಟೋ ಟ್ರಿಗರ್ ಅಂತಾರಾಷ್ಟ್ರೀಯ ಕಲಾತ್ಮಕ ಛಾಯಾಚಿತ್ರ ಪ್ರದರ್ಶನದಲ್ಲಿ ತಾಲೂಕಿನ ಖ್ಯಾತ ಛಾಯಾಚಿತ್ರಗ್ರಾಹಕ ನಾಗೇಂದ್ರ ಮುತ್ಮುರ್ಡು ಅವರು ಸಮಗ್ರ ಅತ್ಯುತ್ತಮ ಸ್ಪರ್ಧಿಗೆ ನೀಡುವ ಎಫ್‌ಐಎಪಿ ಬ್ಲೂೃ ಬ್ಯಾಡ್ಜ್ ಫಾರ್ ಇಂಟರ್‌ನ್ಯಾಶನಲ್ ಬೆಸ್ಟ್ ಎಂಟ್ರಂಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

‘ಮುಸ್ಸಂಜೆ ಮಾತುಕತೆ’ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. ಪ್ರಪಂಚದ 40 ದೇಶಗಳ 288 ಛಾಯಾಚಿತ್ರ ಗ್ರಾಹಕರು ಭಾಗವಹಿಸಿದ್ದರು. ನಾಲ್ಕು ವಿಭಾಗಗಳಲ್ಲಿ ಒಟ್ಟಾರೆ ವಯಕ್ತಿಕವಾಗಿ ಗಳಿಸಿದ ಗರಿಷ್ಠ ಅಂಕಗಳು ಹಾಗೂ ಪದಕಗಳ ಆಧಾರದ ಮೇಲೆ ಪ್ರಶಸ್ತಿಯನ್ನು ನಾಗೇಂದ್ರ ಮುತ್ಮುರ್ಡು ಅವರಿಗೆ ನೀಡಲಾಗುತ್ತಿದೆ.

ವಿಶೇಷವೆಂದರೆ ನಾಲ್ಕು ವಿಭಾಗಗಳಲ್ಲಿ ನಾಲ್ಕು ಪ್ರಶಸ್ತಿಗಳೊಂದಿಗೆ ನಾಗೇಂದ್ರ ಅವರ ಹದಿನೆಂಟು ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಪ್ರತ್ಯೇಕ ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ ಇವರ ಕೀಟಗಳ ಮಿಲನೋತ್ಸವ(ಬಗ್ಸ್ ಮೇಟಿಂಗ್) ಚಿತ್ರಕ್ಕೆ ಅಮೇರಿಕಾದ ಪಿಎಸ್‌ಎ ಚಿನ್ನದ ಪದಕ ಲಭಿಸಿದೆ. ಮಾರ್ಚ್ ತಿಂಗಳಲ್ಲಿ ಜಾರ್ಜಿಯಾದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದ ಜತೆಗೆ ನಾಗೇಂದ್ರ ಅವರ ಪ್ರಶಸ್ತಿ ವಿಜೇತ ಹಾಗೂ ಆಯ್ಕೆಯಾದ ಉತ್ತಮ ಚಿತ್ರಗಳ ಪ್ರದರ್ಶನವೂ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net