ಡಾ. ಅಭಿಷೇಕಗೆ ಅಂತಾರಾಷ್ಟ್ರೀಯ ಪ್ರಶಸ್ತಿ

IMG_20240630_193449_899.jpg
Published on

ಹುಬ್ಬಳ್ಳಿ: ಸಿಂಗಪೂರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಇಂಟರ್ನ್ಯಾಷನಲ್ ಟೀಂ ಫಾರ್ ಇಂಪ್ಲಾಂಟಾಲಜಿ (ಐಟಿಐ) ವರ್ಲ್ಡ್ ವಿಚಾರ ಸಂಕಿರಣದಲ್ಲಿ ನಗರದ ಖ್ಯಾತ ದಂತ ವೈದ್ಯ ಡಾ. ಅಭಿಷೇಕ ಎಸ್. ಕವಳೇಕರ್ ಅವರಿಗೆ "ಯಂಗ್ ಐಟಿಐ ವರ್ಲ್ಡ ಸಿರೀಸ್' ಪ್ರಶಸ್ತಿ ಲಭಿಸಿದೆ.

ಐಟಿಐ ಇದು ಅತ್ಯಂತ ಹಳೆಯ ಹಾಗೂ ದೊಡ್ಡ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಡೆಂಟಲ್ ಇಂಪ್ಲಾಂಟ್ ಪ್ರ್ಯಾಕ್ಟಿಸ್ ಕುರಿತು ಗುಣಮಟ್ಟ ನಿರ್ಧಾರ ಹಾಗೂ ಮಾರ್ಗದರ್ಶನ ನೀಡುತ್ತದೆ. ಇದು ಆಯೋಜಿಸಿದ್ದ ಯಂಗ್ ಇಂಟರ್ನ್ಯಾಷನಲ್ ಟೀಂ ಆಫ್ ಇಂಪ್ಲಾಂಟಾಲಜಿ ವರ್ಲ್ಡ್ ಸೀರಿಸ್ ಸ್ಪರ್ಧೆಯಲ್ಲಿ ಧಾರವಾಡದ ಎಸ್ ಡಿಎಂ ದಂತ ವೈದ್ಯಕಿಯ ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿಯೂ ಆಗಿರುವ ಡಾ. ಅಭಿಷೇಕ ಕವಳೇಕರ ಭಾಗವಹಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಈ ಸ್ಪರ್ಧೆಗೆ ಭಾರತದಿಂದ ಆಯ್ಕೆಯಾಗಿದ್ದ ಏಕೈಕ ವೈದ್ಯರಾಗಿರುವ ಇವರು, ವಿಶ್ವದ ವಿವಿಧೆಡೆಯಿಂದ ಆಗಮಿಸಿದ್ದ 32 ಸ್ಪರ್ಧಿಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಜಗತ್ತಿನ ಸುಮಾರು ಆರು ಸಾವಿರ ಇಂಪ್ಲಾಂಟಾಲಾಜಿಸ್ಟಗಳು ಭಾಗವಹಿಸಿದ್ದ ವಿಚಾರ ಸಂಕಿರಣದಲ್ಲಿ ಇವರು ತಮ್ಮ ಸಂಶೋಧನೆ ಪ್ರಸ್ತುತ ಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net