ಪ್ರಶಾಂತಗೆ ಅಂತಾರಾಷ್ಟ್ರೀಯ ಪ್ರಶಸ್ತಿ

prashant hegde
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಹಂಗೇರಿಯ ಬುದಾಪೆಸ್ಟ್​ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹುಸ್ಟೆಫ್-2025 ಸಮ್ಮೇಳನದಲ್ಲಿ ಪ್ರಶಾಂತ ಹೆಗಡೆಗೆ ಬೆಸ್ಟ್ ಪ್ರಸೆಂಟೇಶನ್ ಅವಾರ್ಡ್ ಲಭಿಸಿದೆ.

ಯುರೋಪಿನ ಅತ್ಯಂತ ದೊಡ್ಡ ಸಮ್ಮೇಳನಗಳಲ್ಲಿ ಒಂದಾದ ಹುಸ್ಟೆಫ್​ನಲ್ಲಿ 25 ದೇಶಗಳ 750ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ 40ಕ್ಕೂ ಹೆಚ್ಚು ವಿಶ್ವ ಮಟ್ಟದ ಭಾಷಣಕಾರರು ಭಾಗವಹಿಸಿದ್ದರು. ಮೂಲತಃ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕಡತೋಕದವರಾದ ಪ್ರಶಾಂತ ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರ್​ನಲ್ಲಿ ಪದವಿ ಪಡೆದಿದ್ದಾರೆ.

ಸಾಫ್ಟವೇರ್ ಟೆಸ್ಟಿಂಗ್ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿ ಪ್ರಶಾಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಬೇಡಿಕೆಯ ಭಾಷಣಕಾರರಾಗಿರುವ ಅವರು ಹಲವಾರು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಥೈಲ್ಯಾಂಡ್, ಸಿಂಗಾಪುರ್, ಅಮೆರಿಕಾ, ಇಟಲಿ, ಹಂಗೇರಿ, ಬೆಲ್ಜಿಯಂ, ಮಲೇಷ್ಯಾ ಮುಂತಾದ ದೇಶಗಳಲ್ಲಿ ನಡೆದ ವಿವಿಧ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಷಣ ಮಾಡಿದ್ದಾರೆ. ಅವರು ಕೆಲವು ವರ್ಷಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2023ರಲ್ಲಿ ಆಂಟವರ್ಪಾದಲ್ಲಿ ಆಯೋಜಿಸಿದ್ದ ಯುರೋಸ್ಟಾರ್ ಸಮ್ಮೇಳನದಲ್ಲಿ ಬೆಸ್ಟ್ ಮ್ಯಾನೇಜರ್ ಆಫ್ ದಿ ಇಯರ್ ಎಂಬ ಗೌರವ ಪ್ರಶಸ್ತಿಯನ್ನು ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net