ಆಂತರಿಕ ಶಕ್ತಿ ಹೆಚ್ಚಿಸಿಕೊಂಡು ಗುರಿ ತಲುಪಲಿ

Published on

ಸಿಂಧನೂರು: ನಿರಂತರ ಪ್ರಯತ್ನ, ಶ್ರದ್ಧೆ, ಛಲ, ಕಠಿಣ ಪರಿಶ್ರಮ ಇದ್ದರೆ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಸಾಧ್ಯವಾಗಲಿದೆ ಎಂದು ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಒಳಬಳ್ಳಾರಿ ಗ್ರಾಮದ ಶಿವಯೋಗಿ ಚನ್ನಬಸವೇಶ್ವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

ಬಡತನ, ಹಳ್ಳಿಯ ಶಾಲೆ, ಕನ್ನಡ ಮಾಧ್ಯಮ, ಅನಕ್ಷರತೆ, ತಂದೆ-ತಾಯಿ ಇವು ಸಾಧನೆಗೆ ಅಡ್ಡಿ ಎಂದು ಬಹುತೇಕರು ಭಾವಿಸಿ ಸಾಧನೆ ಮಾಡಲು ಹಿಂದೇಟು ಹಾಕುತ್ತಾರೆ. ಬಡತನ ಎಂಬುದು ವರವೇ ಹೊರತು ಶಾಪವಲ್ಲ. ಸಮಸ್ಯೆಗಳ ಸುಳಿಯಿಂದಲೇ ಸಾಧಕರು ಎದ್ದು ಬರುವುದು. ಶೈಕ ್ಷಣಿಕವಾಗಿ ಸಾಧನೆ ಮಾಡಲು ಅಥವಾ ಜ್ಞಾನ ಸಂಪಾದನೆಗೆ ಬಡವ ಶ್ರೀಮಂತ ಎಂಬ ಭೇದವಿಲ್ಲ. ವಿದ್ಯಾರ್ಥಿಗಳು ತಮ್ಮ ಆಂತರಿಕ ಶಕ್ತಿ ಹೆಚ್ಚಿಸಿಕೊಂಡು ಗುರಿ ತಲುಪಬೇಕು. ಜೊತೆಗೆ ತಂತ ್ರಜ್ಞಾನ ಬಳಕೆ ಮಾಡಿಕೊಂಡು ಹೊಸ ಆವಿಷ್ಕಾರ, ಆಲೋಚಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.

ಮುಖ್ಯಶಿಕ್ಷಕ ಹಂಪನಗೌಡ ಮಾತನಾಡಿ, ಯಾವುದೇ ಪರೀಕ್ಷೆ, ಗುರಿ ಸಾಧನೆಗೆ ಮತ್ತು ಯಶಸ್ಸು ಗಳಿಸಲು ಕಠಿಣ ಅಧ್ಯಯನ ಹಾಗೂ ತಾಳ್ಮೆ ಅಗತ್ಯ. ಎಲ್ಲರಲ್ಲೂ ಕನಸುಗಳು ಇರುತ ್ತವೆ. ಅದನ್ನು ನನಸು ಮಾಡಿಕೊಳ್ಳುವ ಮನೋಭಾವ, ಆತ್ಮಸ್ಥೈರ್ಯ, ಛಲ ಇರಬೇಕು ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ಶೇ.97.92 ಫಲಿತಾಂಶ ಪಡೆದ ಸುಮಿತ್ರಾ ಉಪ್ಪಳೆಪ್ಪ ಗಿಣಿವಾರ ಹಾಗೂ ಮುಖ್ಯಶಿಕ ್ಷಕ ಹಂಪನಗೌಡ ಸೇರಿದಂತೆ ಎಲ್ಲ ಶಿಕ್ಷಕ ವರ್ಗದವರಿಗೆ ಸಸಿಗಳನ್ನು ನೀಡಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net