ಒಳ ಮೀಸಲಾತಿ ವರದಿ ಆವೈಜ್ಞಾನಿಕ- ಮಹೇಂದ್ರ ಕುಮಾರ ಮಿತ್ರ ಆರೋಪ

mahendra kumara mitra
mahendra kumara mitra
Published on

ರಾಯಚೂರು ರಾಜ್ಯದಲ್ಲಿ ಪರಿಶಿಷ ಪರಿಶಿಷ್ಟ ಜಾತಿಗಳ ಒಳ ಮೀಸಲು ವರ್ಗೀಕರಣಕ್ಕೆ ನೇಮಿಸಲಾಗಿದ್ದ ನಾ.ನಾಗಮೋಹನ ದಾಸ ಆಯೋಗ ವರದಿ ಆವೈಜ್ಞಾನಿಕವಾಗಿದೆಂದು ಡಾ.ಬಿ.ಆರ್.ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಸಲಹೆ ಪಡೆಯದೇ ವರದಿ ನೀಡಲಾಗಿದೆ. ಪರಿಶಿಷ್ಟ ಜಾತಿಗಳ ಶೈಕ್ಷಣಿಕ, ಸರ್ಕಾರಿ ಸೇವೆಗಳ ಸೇರಿ ವಿವಿಧ ಉಪ ಜಾತಿಗಳ ಪ್ರಾತಿನೀಧ್ಯದ ಕುರಿತು ಮಾಹಿತಿ ಒದಗಿಸಬೇಕಿತ್ತು.

ಹಿಂದುಳಿದ ವರ್ಗಗಳಾದ ಲಂಬಾಣಿ, ಭೋವಿ, ಕೊರಚ, ಕೊರಮ ಜಾತಿಗಳನ್ನು ಎಸ್ಸಿ ಪಟ್ಟಿಯಿಂದ ಕೈಬಿಡಲುವ ಆದೇಶ ಬಾಕಿಯಿದೆ. ಅಲ್ಲದೇ ಸಂವೀಧಾನದ 341(1) ಪ್ರಕಾರ ಯಾವ ಪರಿಶಿಷ್ಟ ಜಾತಿಯವರು ಅಸ್ಪಶ್ಯತೆ, ಸಮಾಜಿಕ ಕಳಂಕಕ್ಕೆ ತುತ್ತಾಗಿದ್ದಾರೆ ಮತ್ತು ಹಿಂದೂ ಧರ್ಮವನ್ನು ಪಾಲನೆ ಮಾಡುತ್ತಾರೋ ಅವರಿಗೆ ಪರಿಶಿಷ್ಟ ಜಾತಿ ಮೀಸಲಾತಿ ದೊರಕಬೇಕು.

ಕ್ರೈಸ್ತ ಮತ್ತು ಬೌದ್ಧ ಧರ್ಮಪಾಲನೆ ಮಾಡುವವರಿಗೆ ಮೀಸಲಾತಿ ದೊರಕಬಾರದು. ಆದರೆ ಆಯೋಗ ವರದಿಯಲ್ಲಿ ಅನ್ಯ ಧರ್ಮಪಾಲನೆ ಮಾಡಿದುವರನ್ನು ಪ್ರತ್ಯೇಕವಾಗಿ ವಿಂಗಡಿಸಿಲ್ಲ, ಆಯೋಗದ ವರದಿಯಲ್ಲಿ ಪುಟ ಸಂಖ್ಯೆ 106, 122 ರಲ್ಲಿ ಕ್ರಮ ಸಂಖ್ಯೆ 102 ರಲ್ಲಿ 1960 ರಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇರದೇ ಇರುವ ಕುಟುಂಬಗಳು ಸೇರಿಕೆಯಾಗಿವೆ. ಅಲ್ಲದೇ ಆಯೋಗ ಆದಿ ಕರ್ನಾಟಕ, ಆದಿ ದ್ರಾವಿಡ ಸಮಸ್ಯೆ ಪರಿಹರಿಸಿಲ್ಲ. ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳಿಗೆ ನ್ಯಾಯ ನೀಡಲು ಆಯೋಗ ಪ್ರಯತ್ನಿಸಿಲ್ಲ.

ಸರ್ಕಾರ ಪ್ರಭಾವ ಬಳಕೆಯಾಗಿದೆ. ಒಕ್ಕಲಿಗ ಸಮಾಜ ಸೇರಿದಂತೆ ನಾಗಮೋಹನ ದಾಸ ಸೇರಿ ಇತರರು ಬೇರೆ ಜಾತಿಯವರಿದ್ದು, ಅವರಿಗೆ ಪರಿಶಿಷ್ಟಜಾತಿಗಳ ಸಮಸ್ಯೆ ಅಧ್ಯಯನ ವಿಲ್ಲದೇ ನೀಡಿದಂತಾಗಿದೆ. ಸರ್ಕಾರ ಎಚ್ಚರಿಕೆ ನಿರ್ಧಾರ ಕೈಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ನರಸಿಂಹಲು ಪೋತಗಲ್, ಭಾಸ್ಕರರಾಜ್, ವೈ.ಈರಪ ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net