ಒಳಮೀಸಲಾತಿ ಶಿಫಾರಸು ಹಿಂಪಡೆಯಲಿ

3kudligi1
ಒಳ ಮೀಸಲಾತಿ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಕೂಡ್ಲಗಿಯಲ್ಲಿ ಶ್ರೀ ಸಂತ ಸೇವಾಲಾಲ್ ಬಂಜಾರ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ತಾಲೂಕು ಪದಾಧಿಕಾರಿಗಳು ಹಾಗೂ ಸದಸ್ಯರು ತಹಸೀಲ್ದಾರ್ ಟಿ.ಜಗದೀಶ್‌ಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಶಿವ ಕುಮಾರ್, ತಾಲೂಕು ಅಧ್ಯಕ್ಷ ಎಸ್.ಆರ್.ಶ್ಯಾಮಾನಾಯ್ಕಾ, ಗೌರವಾಧ್ಯಕ್ಷ ಎಂ.ರತ್ನನಾಯ್ಕ, ಎಂ.ವಿ.ಪ್ರಕಾಶ್ ನಾಯ್ಕ, ಉಪಾಧ್ಯಕ್ಷರಾದ ಬಸು ನಾಯ್ಕ, ರತ್ನ ನಾಯ್ಕ, ಕಾರ್ಯದರ್ಶಿಗಳಾದ ವೆಂಕಟೇಶ್ ನಾಯ್ಕ, ರಾಮನಾಯ್ಕ ಇತರರಿದ್ದರು.
Published on

ಕೂಡ್ಲಿಗಿ: ಕೇಂದ್ರಕ್ಕೆ ಶಿಫಾರಸು ಮಾಡಿರುವ ಒಳ ಮೀಸಲಾತಿಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಶ್ರೀ ಸಂತ ಸೇವಾಲಾಲ್ ಬಂಜಾರ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ತಾಲೂಕು ಪದಾಧಿಕಾರಿಗಳು ಸೋಮವಾರ ಸಂಡೂರು ರಸ್ತೆಯಲ್ಲಿರುವ ಸಂತ ಸೇವಾಲಾಲ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ತಹಸೀಲ್ದಾರ್ ಟಿ.ಜಗದೀಶ್‌ಗೆ ಮನವಿ ಸಲ್ಲಿಸಿದರು.

ಸಂಸ್ಥೆಯ ತಾಲೂಕು ಅಧ್ಯಕ್ಷ ಎಸ್.ಆರ್.ಶ್ಯಾಮನಾಯ್ಕಾ ಮಾತನಾಡಿ, ಸರ್ಕಾರ ನ್ಯಾಯಾಮೂರ್ತಿಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಚರ್ಚಿಸದೇ ಸಮಾಜದಲ್ಲಿ ಗೊಂದಲಗಳನ್ನು ಎಬ್ಬಿಸಿ, ದಲಿತ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮೂಡುವಂತೆ ಮಾಡಿದೆ ಎಂದು ದೂರಿದರು.

ಪರಿಶಿಷ್ಟರಲ್ಲಿ ನಾಲ್ಕು ವರ್ಗಗಳನ್ನು ಮಾಡಿರುವುದು ನ್ಯಾಯ ಸಮ್ಮತವಲ್ಲ. ಬಂಜಾರ ಭೋವಿ, ಕೊರಚ, ಕೊರಮ ಹಾಗೂ ಚಲವಾದಿ ಮತ್ತಿತರ ಒಳ ಸಮುದಾಯಗಳು ಸರ್ಕಾರದ ನಿರ್ಧರವನ್ನು ವಿರೋಧಿಸುತ್ತೇವೆ. ಒಂದು ವೇಳೆ ಸರ್ಕಾರ ಒಳ ಮೀಸಲಾತಿಯನ್ನ ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್ ಮಾತನಾಡಿ, ಸಚಿವ ಜೆ.ಸಿ.ಮಾಧುಸ್ವಾಮಿ ಉಪ ಸಮಿತಿ ವರದಿಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಸಹೋದರ ಸಮುದಾಯಗಳ ಕುರಿತು ವಸ್ತುನಿಷ್ಠ ಅಧ್ಯಯನ ನಡೆಸಿಲ್ಲ. ಅನಗತ್ಯವಾಗಿ ಸ್ಪಶ್ಯರು, ಅಸ್ಪೃಶ್ಯರು, ಎಡಗೈ, ಬಲಗೈ ಎಲ್ಲ ಸೌಲಭ್ಯ ಪಡೆದವರು, ಮುಂದುವರಿದವರು, ಅಭಿವೃದ್ಧಿ ಆಗಿರುವವರು ಎಂದು ನೀಡಿರು ಹೇಳಿಕೆಯನ್ನು ಹಿಂಪಡೆಯಬೇಕು.

ಅಸಂವಿಧಾನಿಕ, ಅವಾಸ್ತವಿಕ ಅಂಶಗಳ ಮುಖಾಂತರ ಪರಿಶಿಷ್ಟ ಸಹೋದರ ಸಮುದಾಯಗಳ ನಡುವಿನ ಐಕ್ಯತೆ ಛಿದ್ರಗೊಳಿಸುವ ಉಪ ಸಮಿತಿ ವರದಿಯನ್ನು ತಿರಸ್ಕಾರ ಮಾಡಬೇಕು. ಇಲ್ಲದಿದ್ದರೆ ಎಲ್ಲ ತಾಂಡಾಗಳಿಂದ ಚುನಾವಣೆ ಬಹಿಷ್ಕಾರ ಮಾಡುವುದಾಗಿ ತಿಳಿಸಿದರು.

ಸಂಸ್ಥೆಯ ಗೌರವಾಧ್ಯಕ್ಷ ಎಂ.ರತ್ನನಾಯ್ಕ, ಎಂ.ವಿ.ಪ್ರಕಾಶ್ ನಾಯ್ಕ, ಉಪಾಧ್ಯಕ್ಷರಾದ ಬಸು ನಾಯ್ಕ, ರತ್ನ ನಾಯ್ಕ, ಕಾರ್ಯದರ್ಶಿಗಳಾದ ವೆಂಕಟೇಶ್ ನಾಯ್ಕ, ರಾಮನಾಯ್ಕ, ಖಜಾಂಚಿ ವಾಸುದೇವ ನಾಯ್ಕ, ಪ್ರಧಾನ ಕಾರ್ಯದರ್ಶಿ ದುರ್ಗನಾಯ್ಕ, ಬೋವಿ ಸಂಘದ ಉಪಾಧ್ಯಕ್ಷ ಬುಡ್ಡರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net