

ವಿಜಯಪುರ : ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತಂತೆ ನ್ಯಾ. ಡಾ. ಎಚ್.ಎನ್. ನಾಗಮೋಹನ ದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ಸಮೀಾ ಅವಧಿ ವಿಸ್ತರಿಸಲಾಗಿದೆ.
ಮೊದಲನೇ ಹಂತದ ಮನೆ&ಮನೆ ಭೇಟಿ ನೀಡುವ ಸಮೀೆಯನ್ನು ಮೇ 25ರವರೆಗೆ, ಎರಡನೇ ಹಂತದ ವಿಶೇಷ ಶಿಬಿರ (ಸಮೀಾ ಬ್ಲಾಕ್ ವ್ಯಾಪ್ತಿಯಲ್ಲಿ) ಸಮೀೆಯನ್ನು ಮೇ 26 ರಿಂದ ಮೇ 28 ರವರೆಗೆ ಮರು ನಿಗದಿಪಡಿಸಲಾಗಿದ್ದು, ಮತ್ತು ಮೂರನೇ ಹಂತದ ಆನ್ಲೈನ್ ಮೂಲಕ ಸ್ವಯಂ ೂಷಣೆಯನ್ನು ಮೇ 19 ರಿಂದ ಮೇ 28 ರವರೆಗೆ ವಿಸ್ತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.