ಒಳ ಮೀಸಲಾತಿ ವಿರೋಧಿಸಿ ರಸ್ತೆ ತಡೆ

oplus_2
oplus_2
Published on

ರಾಮದುರ್ಗ: ರಾಜ್ಯ ಸರ್ಕಾರ ಘೋಷಿಸಿದ ಒಳಮೀಸಲಾತಿಯಲ್ಲಿ ಅನ್ಯಾಯವಾಗಿದ್ದು, ಕೂಡಲೇ ಆದೇಶ ಮರು ಪರಿಶೀಲಿಸಿ, ಶೇ.7ಕ್ಕೆ ಹೆಚ್ಚಿಸುವಂತೆ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯದವರು ಮಂಗಳವಾರ ಪ್ರತಿಭಟಿಸಿ, ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪಟ್ಟಣದ ತಾಪಂ ಆವರಣದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಬಹತ್ ಪಾದಯಾತ್ರೆಯೊಂದಿಗೆ ಜುನಿಪೇಟೆ ಮಾರ್ಗವಾಗಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೇರಿದರು. ಕೆಲ ಕಾಲ ರಸ್ತೆ ತಡೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆ ಶಿರೂರ ಮಠದ ಕುಮಾರ ಮಹಾರಾಜರು ಮಾತನಾಡಿ, ರಾಜ್ಯ ಸರ್ಕಾರ ಪರಿಶಿಷ್ಠ ಜಾತಿಯಲ್ಲಿ ಸ್ಪರ್ಶ ಮತ್ತು ಅಸ್ಪರ್ಶ ಎಂದು ವಿಂಗಡಣೆ ಮಾಡಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಒಳ ಮೀಸಲಾತಿ ಆದೇಶದ ವಿರುದ್ಧ ಸೆ.4ರಂದು ಬೆಳಗಾವಿಯಲ್ಲಿ ಹಾಗೂ ಸೆ.10ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮುಖಂಡರಾದ ಮಂಜುನಾಥ ಪಮ್ಮಾರ, ಶಂಕರ ನಾಯಕ, ಕೃಷ್ಣಾ ಚವ್ಹಾಣ, ಆರ್.ಸಿ.ರಾಠೋಡ, ನಾಗರಾಜ ಕಟ್ಟಿಮನಿ, ನಾಗಪ್ಪ ಭಜಂತ್ರಿ, ಶೇಖರ ಕೊರವರ, ಜೀವಲೆಪ್ಪ ಲಮಾಣಿ, ಹನುಮಂತ ಬಂಟನೂರ, ಎಂ.ಎಸ್.ಚವ್ಹಾಣ, ಶ್ರೀಕಾಂತ ಭಜಂತ್ರಿ, ರಮೇಶ ನಾಯಕ, ಬಸವರಾಜ ಕೊರವರ, ರಮೇಶ ಬಂಡಿವಡ್ಡರ, ರಮೇಶ ಭಜಂತ್ರಿ, ಶಂಕರ ಭಜಂತ್ರಿ, ದಾನಪ್ಪ ನಾಯಕ, ಶೇಖಪ್ಪ ಕೊರವರ, ಯಲ್ಲಪ್ಪ ಇಟಗಿ, ಅಡಿವೆಪ್ಪ ಸಿಪ್ರಿ, ವೆಂಕಪ್ಪ ಸಿಪ್ರಿ, ಯಂಕಪ್ಪ ಕುರವಿನಕೊಪ್ಪ, ವಿಜಯಕುಮಾರ ರಾಠೋಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net