ಒಳಮೀಸಲಾತಿ ಜಾರಿಗೆ ಮೀನಮೇಷ

23 KHP 01
ಕಾನಹೊಸಹಳ್ಳಿ ಹೊರವಲಯದಲ್ಲಿ ಸೋಮವಾರ ಸಂಸದ ಗೊಂವಿದ ಕಾರಜೋಳಗೆ ದಲಿತ ಮುಖಂಡರು ಮನವಿ ಸಲ್ಲಿಸಿದರು. ಮುಖಂಡರಾದ ಮುರಾರ್ಜಿ ಡಿ,ಒ, ಎಳೆನೀರು ಗಂಗಾಧರ್, ಕಾನಾಮಡುಗು ಎಚ್.ದುರುಗಪ್ಪ, ಫಕೀರಪ್ಪ, ಹೊನ್ನೂರಸ್ವಾಮಿ ಇತರರಿದ್ದರು.
Published on

ಕಾನಹೊಸಹಳ್ಳಿ: ದಲಿತ ವರ್ಗಗಳ ಪೈಕಿ ಮಾದಿಗ ಸಮುದಾಯ ಅತ್ಯಂತ ಹಿಂದುಳಿದಿದ್ದು, ಸುಪ್ರೀಂಕೋರ್ಟ್ ಸಹ ಮಿಸಲಾತಿ ಅವಶ್ಯ ಎಂದಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.

ಸಂಡೂರಿಗೆ ಹೊರಟ್ಟಿದ್ದ ವೇಳೆ ಕಾನಹೊಸಹಳ್ಳಿ ಹೊರವಲಯದಲ್ಲಿ ಸೋಮವಾರ ಭೇಟಿಯಾದ ಸ್ಥಳೀಯ ದಲಿತ ಮುಖಂಡರಿಂದ ಮನವಿ ಸ್ವೀಕರಿಸಿ ಮಾತನಾಡಿದರು. ಈ ಹಿಂದಿನ ಬಿಜೆಪಿ ಸರ್ಕಾರ ಒಳ ಮಿಸಲಾತಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಿತ್ತು.

ಆದರೆ, ಕಾಂಗ್ರೆಸ್ ಸರ್ಕಾರ ಮೀನಮೇಷ ಎಣಿಸುತ್ತಿದೆ. ಒಳಮೀಸಲಾತಿ ಜಾರಿಗೆ ತರುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಮುಖಂಡರಾದ ಮುರಾರ್ಜಿ ಡಿ,ಒ, ಎಳೆನೀರು ಗಂಗಾಧರ್, ಕಾನಾಮಡುಗು ಎಚ್.ದುರುಗಪ್ಪ, ಫಕೀರಪ್ಪ, ಹೊನ್ನೂರಸ್ವಾಮಿ, ನಡವಲುಮನೆ ತಿಪ್ಪೇಸ್ವಾಮಿ, ಹೇಮಣ್ಣ, ನೀರಗಂಟಿ ತಿಪ್ಪೇಸ್ವಾಮಿ, ಸಣ್ಣ ನಾಗರಾಜ, ಮಂಜುನಾಥ, ದುರುಗೇಶ್, ಯಂಬಳಿ ಸಿದ್ದಪ್ಪ ಕರಿಬಸಪ್ಪ ಇತರರಿದ್ದರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net