ಒಳ ಮೀಸಲಾತಿ : ಮಾದಿಗ ಸಮುದಾಯಕ್ಕೆ ಶೇ.೦೮ ರಷ್ಟು ನೀಡಲಿ

S.MAREPPA VAKIL
S.MAREPPA VAKIL
Published on

ರಾಯಚೂರು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣ ನೀಡುವ ಶೇ.೧೭ ಮೀಸಲಾತಿಯಲ್ಲಿ ಮಾದಿಗ ಜಾತಿಗಳಿಗೆ ಶೇ.೮ ರಷ್ಟು ಮೀಸಲಾತಿ ನೀಡಬೇಕು ಎಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಸಂಚಾಲಕ ಎಸ್.ಮಾರೆಪ್ಪ ವಕೀಲರು ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಒಳ ಮೀಸಲಾತಿ ವರ್ಗೀಕರಣ ಮಾಡುವ ವಿಚಾರಕ್ಕೆ ಸಂಬAಽಸಿದAತೆ ನ್ಯಾ.ಎಚ್. ಎನ್. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವು ಗುರವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿ ಪರಿಹಾರ ಸೂಚಿಸಿದ ಬೂಟಾಟಿಕೆ ಕ್ರಮವಾಗಿದೆ. ಒಳಮೀಸಲಾತಿ ಜಾರಿಗೆ ದಲಿತ ಸಂಘಟನೆಗಳ ಒತ್ತಡದಿಂದ ಹೋರಾಟ ದಿಕ್ಕು ತಪ್ಪಿಸಲು ಅಯೋಗ ದಿಂದ ಮಧ್ಯಂತರ ವರದಿ ನಾಟಕ ರೂಪಿಸಿದೆ ಎಂದರು.

ರಾಜ್ಯದ ಹಲವು ಸಂಘಟನೆಗಳು ಒಳಮೀಸಲಾತಿ ಜಾರಿ ವರ್ಗಿಕರಣದಲ್ಲಿ ನೀಡುವ ಮೀಸಲಾತಿಯಲ್ಲಿ ಶೇ.೬ ಅಥವಾ ಶೇ.೭ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಬಿಟ್ಟು ಎಲ್ಲರೂ ಶೇ.೮ ರಷ್ಟು ಮೀಸಲಾತಿ ನೀಡಬೇಕು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಮಾದಿಗ ಸಮುದಾಯದ ಜನರು ೪೦ ಲಕ್ಷ ಜನರು ಇz್ದÁರೆ ಎಂಬುದು ವರದಿಯಾಗಿದೆ.ದಶಕಗಳಿಂದ ಮಾದಿಗ ಸಮುದಾಯದ ಜನರು ಮೀಸಲಾತಿ ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿz್ದÁರೆ. ಒಳಮೀಸಲಾತಿ ಜಾರಿ ಪರಿಶಿಷ್ಟ ಜಾತಿಗಳ ವರ್ಗಿಕರಣಕ್ಕೆ ನೀಡುವ ಮೀಸಲಾತಿಯಲ್ಲಿ ಮಾದಿಗ ಸಂಬAಽತ ಜಾತಿಗಳಿಗೆ ಶೇ.೮ ರಷ್ಟು ಮೀಸಲಾತಿ ನೀಡಬೇಕು ಎಂದು ಆಯೋಗಕ್ಕೆ ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಹೇಮರಾಜ ಅಸ್ಕಿಹಾಳ,ನರಸಿಂಹ ಸೇರಿ ಅನೆಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net