ನದಾಫ್ ಸಮಾಜದಿಂದ ಆಂತರಿಕ ಜನಗಣತಿ

Internal Census by NADAF Society
ಜಮಖಂಡಿ ಸಮೀಪದ ಕಡಪಟ್ಟಿ ಜಮಾಲ್ ಮಜರತ್ ಪೀರ ದರ್ಗಾದಲ್ಲಿ ನದಾ ಪಿಂಜಾರ ಸಮಾಜದ ಜನಸಂಖ್ಯೆ ಅರ್ಜಿಗಳನ್ನು ರಾಜ್ಯ ಸದಸ್ಯರಾದ ಸಾಹೇಬಲಾಲ ನದಾಫ್ ಬಿಡುಗಡೆಗೊಳಿಸಿದರು. ಮೌಲಾಸಾಬ ನದಾಫ್, ಚಾಂದಸಾಬ ನದಾಫ್, ಯಾಕೂಬ ನದಾಫ್ ಇದ್ದಾರೆ.
Published on

ಜಮಖಂಡಿ: ರಾಜ್ಯದಲ್ಲಿ ನದಾಫ್ ಪಿಂಜಾರ ಸಮಾಜದ ಜನಸಂಖ್ಯೆ ಎಷ್ಟಿದೆ ಎಂದು ತಿಳಿಯಲು ಕರ್ನಾಟಕ ನದಾಫ್ ಪಿಂಜಾರ ಸಂಘದಿಂದ ಸಮಾಜದ ಜನಗಣತಿ ಮಾಡಲಾಗುತ್ತಿದ್ದು, ಸಮುದಾಯದವರು ಸಹಕಾರ ನೀಡಬೇಕು ಎಂದು ಸಂಘದ ರಾಜ್ಯ ಸದಸ್ಯ ಸಾಹೇಬಲಾಲ್ ತಿಳಿಸಿದರು.

ಸಮೀಪದ ಕಡಪಟ್ಟಿ ಜಮಾಲ್ ಮಜರತ್ ಪೀರ ದರ್ಗಾದಲ್ಲಿ ಜಮಖಂಡಿ ತಾಲೂಕು ಸಂಘದ ಸಭೆಯಲ್ಲಿ ಸಮಾಜದ ಜನಸಂಖ್ಯೆ ಅರ್ಜಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನದಾಫ್ ಪಿಂಜಾರ ಸಮಾಜ ಸುಮಾರು 20 ಲಕ್ಷಕ್ಕೂ ಅಧಿಕ ಇದೆ. ಆದರೆ, ರಾಜ್ಯ ಸರ್ಕಾರದ ವರದಿಯಲ್ಲಿ 1.1 ಲಕ್ಷ ದಷ್ಟು ಮಾತ್ರ ತೋರಿಸಿದ್ದಾರೆ. ಇದು ಸರಿಯಾಗಿಲ್ಲ ಎಂಬ ಕಾರಣಕ್ಕೆ ರಾಜ್ಯದಲ್ಲಿ ಸಮಾಜದವರ ಜನಸಂಖ್ಯೆ ಎಷ್ಟಿದೆ? ಆರ್ಥಿಕವಾಗಿ ಯಾವ ಸ್ಥಿತಿಗತಿಯಲ್ಲಿದ್ದಾರೆ? ಎಂಬುದನ್ನು ತಿಳಿಯಲು ಸಂಘದಿಂದ ಆಂತರಿಕ ಸಮೀಕ್ಷೆ ನಡೆಸಲಾಗುತ್ತಿದೆ. ಇದಕ್ಕೆ ಸಮಾಜ ಬಾಂಧವರು ಸಹಕಾರ ನೀಡಬೇಕು ಎಂದರು.

ರಾಜ್ಯ ಸದಸ್ಯ ಮೌಲಾಸಾಬ ನದಾಫ್ ಮಾತನಾಡಿದರು. ತಾಲೂಕಾಧ್ಯಕ್ಷ ಚಾಂದಸಾಬ ನದಾ, ಯಾಕುಬ ನದಾಫ್, ರಾಜೇಸಾಬ ನದಾ, ಜುಬೇರ ನದಾಫ್, ಜಬ್ಬಾರ ನದಾಫ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net