ಎಚ್​ಎಎಲ್​ನಿಂದ ಇಂಟರ್​ಮೀಡಿಯೆಟ್​ ಜೆಟ್​ ಟ್ರೇನರ್ ಪರೀಕ್ಷೆ

hal-1
Published on

ಬೆಂಗಳೂರು: ಹಿಂದೂಸ್ಥಾನ್​ ಏರೋನಾಟಿಕ್ಸ್​ ಲಿ. (ಎಚ್​ಎಎಲ್​) ಅಭಿವೃದ್ಧಿಸಿರುವ ಸ್ವದೇಶಿ ತಂತ್ರಜ್ಞಾನ ಆಧಾರಿತ ಇಂಟರ್​ಮಿಡಿಯೆಟ್​ ಜೆಟ್​ ಟ್ರೇನರ್​ (ಐಜೆಟಿ)ಯನ್ನು ಸೋಮವಾರ ಯಶಸ್ವಿಯಾಗಿ ಗಿರಕಿ ಪರೀಕ್ಷೆ (ಸ್ಪಿನ್​ ಫ್ಲೈಟ್ ಟೆಸ್ಟ್​) ಮಾಡಲಾಯಿತು.

ಫೈಟರ್​ ಜೆಟ್​ ಸೇರಿ ಇನ್ನಿತರ ವಿಮಾನಗಳ ಪೈಲಟ್​ಗಳಿಗೆ ತರಬೇತಿ ನೀಡುವ ಸಲುವಾಗಿ ಐಜೆಟಿ ಅಭಿವೃದ್ಧಿ ಪಡಿಸಲಾಗಿದೆ. ಈ ವಿಮಾನವು ಈ ಹಿಂದಿನ ಕಿರಣ್​ ಏರ್​ಕ್ರ್ಟಾ್​ನ ಸ್ಥಾನ ಪಡೆಯಲಿದ್ದು, ಇನ್ನು ಮುಂದೆ ಫೈಟರ್​ ಜೆಟ್​ ಪೈಲಟ್​ಗಳಿಗೆ ಐಜೆಟಿ ಮೂಲಕ ತರಬೇತಿ ನೀಡಲಾಗುತ್ತದೆ. ಸೋಮವಾರ ಬೆಂಗಳೂರಿನಲ್ಲಿ ಎಚ್​ಎಎಲ್​ನ ಪರೀಕ್ಷಾ ಪೈಲಟ್​ಗಳಾದ ನಿವೃತ್ತ ಗ್ರೂಪ್​ ಕ್ಯಾಪ್ಟನ್​ ಎಚ್​.ವಿ. ಥಾಕುರ್​ ಮತ್ತು ನಿವೃತ್ತ ವಿಂಗ್​ ಕಮಾಂಡರ್​ ಪಿ. ಅವಸ್ತಿ ಐಜೆಟಿ ಪರೀಕ್ಷೆ ನಡೆಸಿದರು. ಐಜೆಟಿಯನ್ನು ಈ ಹಿಂದೆಯೇ ಪರೀಕ್ಷೆಗೊಳಪಡಿಸಲಾಗಿತ್ತು.

ಮತ್ತೊಮ್ಮೆ ಗಿರಕಿ ಪರೀಕ್ಷೆ ನಡೆಸಲಾಗಿದೆ. ಗಿರಕಿ ಪರೀೆಯು ವಿಮಾನ ಅತಿಮುಖ್ಯ ಪರೀಕ್ಷೆಯಾಗಿದ್ದು, ಸೋಮವಾರದ ಪರೀಕ್ಷೆಯಲ್ಲಿ ಐಜೆಟಿಯನ್ನು 6 ಸುತ್ತು ಗಿರಕಿ ಹೊಡೆಸಲಾಗಿದೆ.ಅದರ ಜತೆಗೆ ಐಜೆಟಿಗೆ ಯುದ್ಧದಂತಹ ಸಂದರ್ಭದಲ್ಲಿ ಬಾಂಬ್​ಗಳನ್ನು ಹಾಕುವುದು, ವಟಿರ್ಕಲ್​ ಆಗಿ ಹಾರಾಟ ನಡೆಸುವುದು, ಹೆಚ್ಚುವರಿ ಸುರಕ್ಷತಾ ಕ್ರಮಗಳು ಹೀಗೆ ಹಲವು ಹೊಸ ತಂತ್ರಜ್ಞಾನ ಅಳವಡಿಸಿ ಪರೀಕ್ಷೆಗೊಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net