

ಹೊಸಪೇಟೆ: ಕರ್ನಾಟಕ ನಾಗರಿಕ ಹಿತರಕ್ಷಣಾ ಸೇವಾ ಟ್ರಸ್ಟ್ ನಿಂದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಕಾಸಿಟ್ಟಿ ಉಮಾಪತಿ ಹೇಳಿದರು.
ಇದನ್ನೂ ಓದಿ: ಶಿರೋಳದಲ್ಲಿ ಸಾಮೂಹಿಕ ವಿವಾಹ ಫೆ. 4ರಂದು
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲಾ ಧರ್ಮದ ಜನರನ್ನು ಒಗ್ಗೂಡಿಸಿ ನಡೆಸುವ ಉಚಿತ ಸಾಮೂಹಿಕ ವಿವಾಹಗಳಿಂದ ಬಡವರಿಗೆ ಅನುಕೂಲವಾಗಲಿದೆ. ಜತೆಗೆ ಕಲುಷಿತಗೊಳ್ಳುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಮರಸ್ಯಕ್ಕೆ ಪ್ರೇರೇಪಿಸುತ್ತದೆ. 24 ವರ್ಷದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮಾ.27ರಂದು ನಗರದ ಶ್ರೀ ಪ್ರಸನ್ನ ಆಂಜನೇಯ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ನೋಂದಣಿಗೆ ಮಾ.20 ಕೊನೆ ದಿನವಾಗಿದೆ ಎಂದರು. ಉಪಾಧ್ಯಕ್ಷ ಗೌಳಿರುದ್ರಪ್ಪ, ಪ್ರಮುಖರಾದ ಅನುರಾಧಾ, ಲಲಿತಾ, ರೇಣುಕಾ ಬಾಯಿ, ಗುಜ್ಜಲ್ ರಮೇಶ, ಬಿ.ಜೆ.ಕವಿತಾ, ಚಂದ್ರು ದೇವಲಾಪುರ, ತಿರುಮಲೇಶ, ಬಸವರಾಜ ಗೌಳಿ, ಎಂ.ಬಿ.ಉಮಾ, ಜಯಶ್ರೀ ಇತರರಿದ್ದರು.